ಹಾವೇರಿ: ಗ್ರಾಮೀಣ ಕ್ರೀಡಾ ಕುಸ್ತಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತೃತೀಯ ‘ಕರ್ನಾಟಕ ಕುಸ್ತಿ ಹಬ್ಬ’ವನ್ನು ಮಾರ್ಚ್ 1ರಿಂದ 5ರವರೆಗೆ ಐದು ದಿನ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶ್ರೀರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನ ದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ಕುಸ್ತಿ ಏರ್ಪಡಿಸಲಾಗಿದೆ. ಅಂಕಗಳ ಆಧಾರದಲ್ಲಿ ಮಣ್ಣಿನ ಮೇಲೆ ಕುಸ್ತಿಯನ್ನು ನಡೆಸಲಾಗುವುದು. ಎಂಟು ವಿಭಾಗಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪಂದ್ಯಗಳು ಜರುಗಲಿವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

₹1.37 ಕೋಟಿ ಬಹುಮಾನ: ಕುಸ್ತಿ ಹಬ್ಬದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಸರ್ಕಾರ ₹3 ಕೋಟಿ ಮೀಸಲಿಟ್ಟಿದೆ. ಕುಸ್ತಿಪಟುಗಳಿಗೆ ಬಹುಮಾನ ಮೊತ್ತವಾಗಿ ಒಟ್ಟು ₹1.37 ಕೋಟಿ ನೀಡಲಾಗುವುದು. ‘ಬಾಲಕೇಸರಿ’ ಪ್ರಶಸ್ತಿಗೆ ₹75 ಸಾವಿರ, ‘ಕರ್ನಾಟಕ ಕಿಶೋರ, ಕಿಶೋರಿ’ ಪ್ರಶಸ್ತಿಗೆ ₹1 ಲಕ್ಷ, ‘ಕರ್ನಾಟಕ ಕುಮಾರ ಹಾಗೂ ಕುಮಾರಿ’ ಪ್ರಶಸ್ತಿಗೆ ₹2 ಲಕ್ಷ ಹಾಗೂ ‘ಕರ್ನಾಟಕ ಕೇಸರಿ’ ಪ್ರಶಸ್ತಿಗೆ ₹4.50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.