ಫುಝೌ, ಚೀನಾ: ಭಾರತದ ಆಟಗಾರರಾದ ಪರುಪಳ್ಳಿ ಕಶ್ಯಪ್ ಮತ್ತು ಬಿ.ಸಾಯಿಪ್ರಣೀತ್, ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್ನಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿತು.

ಡೆನ್ಮಾರ್ಕ್ ಆಟಗಾರ, ನಾಲ್ಕನೇ ಶ್ರೇಯಾಂಕದ ಆ್ಯಂಡರ್ಸ್ ಅಂಟೊನ್ಸೆನ್ ಗುರುವಾರ ನಡೆದ ಪಂದ್ಯದಲ್ಲಿ 20–22, 22–20, 21–16 ರಿಂದ ಸಾಯಿಪ್ರಣೀತ್ ಅವರನ್ನು ಹಿಮ್ಮೆಟ್ಟಿಸಿದರು. ಪ್ರಣೀತ್ ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಇದಕ್ಕೆಮೊದಲು, ವಿಶ್ವ ಕ್ರಮಾಂಕದಲ್ಲಿ 25ನೇ ಸ್ಥಾನದಲ್ಲಿರುವ ಕಶ್ಯಪ್ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ವಿಕ್ಟರ್ ಆಕ್ಸೆಲ್ಸನ್ (ಡೆನ್ಮಾರ್ಕ್) ಅವರಿಗೆ 13–21, 19–21ರಿಂದ ನೇರ ಆಟಗಳಲ್ಲಿ ಮಣಿದರು. ಕಶ್ಯಪ್, ಮಾರ್ಚ್ನಲ್ಲಿ ನಡೆದ ಇಂಡಿಯಾ ಓಪನ್ನಲ್ಲೂ ಇದೇ ಎದುರಾಳಿಗೆ ಸೋತಿದ್ದರು.

ಮಿಕ್ಸೆಡ್ ಡಬಲ್ಸ್ನಲ್ಲೂ ಭಾರತದ ಸವಾಲು ಮೂರನೇ ಸುತ್ತಿಗೆ ಮೊದಲೇ ಅಂತ್ಯ ಕಂಡಿತು. ಶ್ರೇಯಾಂಕರಹಿತ ಜೋಡಿಯಾದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ 21–23, 16–21ರಲ್ಲಿ ಐದನೇ ಶ್ರೇಯಾಂಕದ ಸಿಯೊ ಸ್ಯುಂಗ್ ಜೇ ಮತ್ತು ಚೇ ಯುಜುಂಗ್ (ದಕ್ಷಿಣ ಕೊರಿಯಾ) ಜೋಡಿಗೆ ಶರಣಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.