ನವದೆಹಲಿ: ಮೊದಲ ಕೊಕ್ಕೊ ವಿಶ್ವಕಪ್ ಇಲ್ಲಿನ ತ್ಯಾಗರಾಜ ಕ್ರೀಡಾಂಗಣ
ದಲ್ಲಿ ಮುಂದಿನ ಜನವರಿ 13 ರಿಂದ 19ರವರೆಗೆ ನಡೆಯಲಿದೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ದೇಸಿ ಕ್ರೀಡೆಯ ವೈಭವ ಪ್ರದರ್ಶನಕ್ಕೆ ಇದು ಅವಕಾಶವಾಗಿದೆ. ವಿಶ್ವಕಪ್ ಘೋಷಣೆಯ ಭಾಗವಾಗಿ ಮಹಾರಾಷ್ಟ್ರ ಮತ್ತು ಭಾರತ ಇತರೆ ತಂಡದ ನಡುವಣ ಪ್ರದರ್ಶನ ಪಂದ್ಯ ನಡೆಯಿತು. ಮಹಾರಾಷ್ಟ್ರ ತಂಡ 26–24ರಿಂದ ಜಯಗಳಿಸಿತು.

ಇದೇ ಸಮಾರಂಭದಲ್ಲಿ ಟ್ಯಾಗ್ಲೈನ್ (#TheWorldGoesKho) ಮತ್ತು ಲೊಗೊ ಅನಾವರಣಗೊಳಿಸಲಾಯಿತು.

ವಿಶ್ವಕಪ್ನಲ್ಲಿ ಮಹಿಳಾ ಮತ್ತು ಪುರುಷರ ವಿಭಾಗಗಳಲ್ಲಿ 24 ತಂಡಗಳು ಭಾಗವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.