ಜಿದ್ದಾ (ಸೌದಿ ಅರೇಬಿಯಾ): ಭಾರತದ ಖುಷ್ ಮೈನಿ ಅವರು ಭಾನುವಾರ ನಡೆದ ಎಫ್2 ಸೌದಿ ಅರೇಬಿಯಾ ಗ್ರ್ಯಾನ್ ಪ್ರಿ ರೇಸ್ನಲ್ಲಿ ಎರಡನೇ ಸ್ಥಾನ ಪಡೆದರು.

ಇನ್ವಿಕ್ಟಾ ರೇಸಿಂಗ್ ಪ್ರತಿನಿಧಿಸುತ್ತಿರುವ ಮೈನಿ ಈ ಹಿಂದೆ ಫಾರ್ಮುಲಾ 2 ರೇಸ್ನಲ್ಲಿ ಪೋಲ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವ್ಯಾನ್ ಅಮರ್ಸ್ಫೂರ್ಟ್ ರೇಸಿಂಗ್ನ ಎನ್ಜೋ ಫಿಟಿಪಾಲ್ಡಿ ಗೆದ್ದರೆ, ಎಂಪಿ ಮೋಟಾರ್ ನ ಡೆನಿಸ್ ಹೌಗರ್ ಮೂರನೇ ಸ್ಥಾನ ಪಡೆದರು.

ಈಗ ಚಾಂಪಿಯನ್ಷಿಪ್ನಲ್ಲಿ 27 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ಮೈನಿ, ಮಾರ್ಚ್ 22-24ರ ವರೆಗೆ ಮೇಲ್ಬರ್ನ್ನಲ್ಲಿ ನಡೆಯಲಿರುವ ಎಫ್2 ಮೂರನೇ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

‘ಇದು ಉತ್ತಮ ರೇಸ್ ಆಗಿತ್ತು. ನಿಜವಾಗಿಯೂ ಸಂತೋಷವಾಗಿದ್ದೇನೆ. ಕಾರು ಅದ್ಭುತವಾಗಿದೆ. ರೇಸ್ನಲ್ಲಿ ಕೆಲವು ಅನುಮಾನಗಳಿದ್ದವು. ಆದರೆ, ಈಗ ಅದು ನಿವಾರಣೆಯಾಗಿದೆ. ಮೇಲ್ಬರ್ನ್ ರೇಸ್ ಎದುರು ನೋಡುತ್ತಿದ್ದೇನೆ’ ಎಂದು ಮೈನಿ ರೇಸ್ ನಂತರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.