ನವದೆಹಲಿ: ಭಾರತದ ಲಾಂಗ್‌ಜಂಪ್ ಸ್ಪರ್ಧಿ ಜೆಸ್ವಿನ್ ಆಲ್ಡ್ರಿನ್ ಅವರು ಲಿಕ್‌ಟೆನ್‌ಸ್ಟೈನ್‌ನಲ್ಲಿ ನಡೆದ ಮೂರನೇ ಗೋಲ್ಡನ್ ಫ್ರೈ ಸೀರಿಸ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನ ಗೆದ್ದರು.

ಸೋಮವಾರ ನಡೆದ ಸ್ಪರ್ಧೆಯಲ್ಲಿ ಅವರು 8.12 ಮೀ. ದೂರ ಜಿಗಿದರು. ಭಾರತದ ಅಥ್ಲೀಟ್ ವಿದೇಶದಲ್ಲಿ ನಡೆದ ಕೂಟದಲ್ಲಿ 8 ಮೀ.ಗಿಂತ ಹೆಚ್ಚಿನ ಸಾಧನೆ ಮಾಡಿದ್ದು ಇದೇ ಮೊದಲು. ಈ ಹಿಂದೆ ಐದು ಕೂಟಗಳಲ್ಲಿ ಪಾಲ್ಗೊಂಡಿದ್ದರೂ 8 ಮೀ. ಗಡಿ ತಲುಪಿರಲಿಲ್ಲ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 8.26 ಮೀ. ಆಗಿದೆ.

ಜೆಕ್‌ರಿಪಬ್ಲಿಕ್‌ನ ರಾಡೆಕ್ ಜಸ್ಕಾ (7.70 ಮೀ.) ಬೆಳ್ಳಿ ಹಾಗೂ ನಾರ್ವೆಯ ಹೆನ್ರಿಕ್ ಫ್ಲಾಟ್ನೆಸ್ (7.66 ಮೀ.) ಕಂಚು ಗೆದ್ದುಕೊಂಡರು.

ಟ್ರಿಪಲ್ ಜಂಪ್ ಸ್ಪರ್ಧಿ ಪ್ರವೀಣ್ ಚಿತ್ರವೇಲ್ ಅವರು ಇಲ್ಲಿ ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸಿ 7.58 ಮೀ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.