ಪ್ಯಾರಿಸ್: ಭದ್ರತೆ ಭೀತಿ ಹೆಚ್ಚಿರುವುದು ಕಂಡು ಬಂದರೆ ಸೀನ್ ನದಿಯಲ್ಲಿ ಯೋಜಿಸಲಾಗಿರುವ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೋಮವಾರ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ಗೆ ಮುಂಚಿತವಾಗಿ ಫ್ರಾನ್ಸ್ ಹೆಚ್ಚಿನ ಭದ್ರತಾ ಎಚ್ಚರಿಕೆ ವಹಿಸಿದೆ. ದೇಶವು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಉದ್ಘಾಟನಾ ಸಮಾರಂಭದಲ್ಲಿ 6 ಕಿಲೋ ಮೀಟರ್ (3.7 ಮೈಲಿ) ಕ್ರೀಡಾಪಟುಗಳು ಚಿಕ್ಕ ದೋಣಿಗಳ ಮೂಲಕ ಮೆರವಣಿಗೆಯಲ್ಲಿ ಸಾಗುವರು. ಲಕ್ಷಾಂತರ ಪ್ರೇಕ್ಷಕರು ಇದನ್ನು ವೀಕ್ಷಿಸಲಿದ್ದಾರೆ.

ಫ್ರಾನ್ಸ್ ಮಾಧ್ಯಮ ಬಿಎಫ್ಎಂ-ಟಿವಿ ಮತ್ತು ಆರ್ಎಂಸಿಯೊಂದಿಗೆ ಮಾತನಾಡಿದ ಮ್ಯಾಕ್ರನ್, ‘ಬಯಲು ಕಾರ್ಯಕ್ರಮದ ಭದ್ರತೆಗಾಗಿ ಕಾನೂನು ಜಾರಿ ಪಡೆಗಳನ್ನು ಅಸಾಧಾರಣ ಮಟ್ಟದಲ್ಲಿ ಸಜ್ಜುಗೊಳಿಸಲಾಗುತ್ತದೆ. ಆದರೆ ಅಪಾಯಗಳಿವೆ ಎಂದು ಭಾವಿಸಿದರೆ, ಪ್ಲಾನ್ ಬಿ ಮತ್ತು ಪ್ಲಾನ್ ಸಿಎಸ್ ಇವೆ‘ ಎಂದು ಮ್ಯಾಕ್ರನ್ ಹೇಳಿದರು.

ಜುಲೈ 26ರಿಂದ ನಡೆಯಲಿರುವ ಕ್ರೀಡಾಕೂಟವು ಕ್ರೀಡಾಂಗಣದ ಹೊರಗೆ ನಡೆಯುವ ಮೊದಲ ಒಲಿಂಪಿಕ್ ಸಮಾರಂಭವಾಗಿದೆ. ಸುಮಾರು 10,500 ಕ್ರೀಡಾಪಟುಗಳು ಸೀನ್ ನದಿಯಲ್ಲಿ ಚಿಕ್ಕ ದೋಣಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.

ಆಯೋಜಕರು ಮೊದಲು ಆರು ಲಕ್ಷ ಜನರಿಗೆ ಉದ್ಘಾಟನಾ ಸಮಾರಂಭವನ್ನು ಯೋಜಿಸಿದ್ದರು. ಬಹುತೇಕರು ನದಿಯ ದಡದಿಂದ ಉಚಿತವಾಗಿ ವೀಕ್ಷಿಸುತ್ತಿದ್ದರು. ಆದರೆ, ಭದ್ರತೆಯ ಕಾರಣಕ್ಕೆ ಒಟ್ಟಾರೆ ಪ್ರೇಕ್ಷಕರ ಸಂಖ್ಯೆಯನ್ನು ಈ ವರ್ಷ ಸುಮಾರು 3 ಲಕ್ಷಕ್ಕೆ ಇಳಿಸಲಾಯಿತು.

ಭದ್ರತಾ ಕಾಳಜಿಯ ಕಾರಣದಿಂದ ಉದ್ಘಾಟನಾ ಸಮಾರಂಭ ವೀಕ್ಷಿಸಲು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಲಾಗುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಬದಲಿಗೆ ಉಚಿತ ಪ್ರವೇಶವು ಆಹ್ವಾನಿತರಿಗೆ ಮಾತ್ರ ಇರುತ್ತದೆ.

ಸದ್ಯ ಉದ್ಘಾಟನಾ ಸಮಾರಂಭದ ಯೋಜನೆಗಳು ಒಂದೇ ಆಗಿರುತ್ತವೆ ಎಂದು ಮ್ಯಾಕ್ರನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.