ನವದೆಹಲಿ: ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರು ಪೆರುವಿನಿಂದ ಭಾರತಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಕ್ರೀಡಾ ಸಲಕರಣೆಗಳಿದ್ದ ಬ್ಯಾಗ್ ಕಳೆದಿದೆ. ಅದನ್ನು ಹುಡುಕಿಕೊಡಲು ನೆರವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪೆರುವಿನಲ್ಲಿ ನಡೆದ ಟೂರ್ನಿಯೊಂದರಲ್ಲಿ ಅವರು ಭಾಗವಹಿಸಿದ್ದರು. ಅಲ್ಲಿಂದ ಸ್ವದೇಶಕ್ಕೆ ಕೆಎಲ್ಎಂ ಏರ್ಲೈನ್ಸ್ ವಿಮಾನದಲ್ಲಿ ಮರಳಿದ್ದರು. ವಿಶ್ವ ರ್ಯಾಂಕಿಂಗ್ನಲ್ಲಿ 35ನೇ ಸ್ಥಾನದಲ್ಲಿರುವ ಮಣಿಕಾ ವಿಮಾನದ ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸಿದ್ದರು. ತಮ್ಮ ಬ್ಯಾಗ್ಗಳಿಗೆ ‘ಬಹುಮುಖ್ಯ’ ಎಂಬ ಟ್ಯಾಗ್ ಕೂಡ ಹಾಕಿದ್ದರು.

‘ನಂಬಲು ಸಾಧ್ಯವಾಗುತ್ತಿಲ್ಲ. ಬಹಳ ಬೇಸರವಾಗಿದೆ. ಪ್ರಮುಖ ಬ್ಯಾಗೇಜ್ ಎಂಬ ಸೂಚನಾ ಚೀಟಿಯನ್ನು ಅಂಟಿಸಿಯೂ ಈ ರೀತಿಯಾಗಿದೆ. ನಾನು ಮುಂಬರುವ ಟೂರ್ನಿಯಲ್ಲಿ ಬಳಸುವ ಬಹುಮುಖ್ಯವಾದ ಕ್ರೀಡಾ ಸಲಕರಣೆಗಳು ಅದರಲ್ಲಿವೆ. ವಿಮಾನ ನಿಲ್ದಾಣ ಸಿಬ್ಬಂದಿಯ ಬಳಿ ನನ್ನ ಪ್ರಶ್ನೆಗೆ ಉತ್ತರ ಅಥವಾ ಪರಿಹಾರ ಇರಲಿಲ್ಲ. ಸಿಂಧಿಯಾ ಸರ್ ದಯವಿಟ್ಟು ಸಹಾಯ ಮಾಡಿ‘ ಎಂದು ಮಣಿಕಾ ಟ್ವೀಟ್ ಮಾಡಿದ್ದಾರೆ.

ಲಿಮಾದಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿಯಲ್ಲಿ ಆಡಲು ಮನಿಖಾ ತೆರಳಿದ್ದರು. 32ರ ಸುತ್ತಿನಲ್ಲಿ ಮನಿಕಾ 11-3, 11-7, 10-12, 6-11, 9-11ರಿಂದ ಜಪಾನಿನ ಮಿಯು ಹಿರಾನೊ ವಿರುದ್ಧ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.