ಮಂಗಳೂರು: ಉಡುಪಿಯ ಸಚಿನ್ ಹಾಗೂ ಅಸ್ಸಾಮ್ನ ಬಿಜೋಯಾ ಬರ್ಮನ್ ಅವರು ‘ನಿವಿಯಸ್ ಮಂಗಳೂರು ಮ್ಯಾರಥಾನ್ 2024’ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಮುಕ್ತ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

42.2 ಕಿ.ಮೀ ದೂರವನ್ನು ಸಚಿನ್ 2 ಗಂಟೆ 43 ನಿಮಿಷ 55 ಸೆಕೆಂಡ್ಗಳಲ್ಲಿ ಕ್ರಮಿಸಿದರು. ಬಿಜೋಯಾ ಬರ್ಮನ್ ಅವರು 3 ಗಂಟೆ 38 ನಿಮಿಷ 8 ಸೆಕೆಂಡ್ಗಳಲ್ಲಿ ಓಟ ಮುಗಿಸಿದರು. ಪುರುಷರ ಮುಕ್ತ ವಿಭಾಗದಲ್ಲಿ ಸೂರಜ್ ಪ್ರಸಾದ ಮತ್ತು ದಿಲೀಪ್ ಹಾಗೂ ಮಹಿಳೆಯರ ಮುಕ್ತ ವಿಭಾಗದಲ್ಲಿ ರೀನಾ ಟಿ.ಎಂ. ಮತ್ತು ಜಶ್ಮಿತಾ ಕೋಂಡೆಕಿರಿ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು ಎಂದು ಸಂಘಟಕರು ತಿಳಿಸಿದ್ದಾರೆ. ಮ್ಯಾರಥಾನ್ ಇನ್ನುಳಿದ ಫಲಿತಾಂಶ ಪರಿಶೀಲನೆ ಬಳಿಕ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

ಮಂಗಳೂರು ಮ್ಯಾರಥಾನ್ನ ಮೂರನೇ ಆವೃತ್ತಿಯಲ್ಲಿ ಡೆನ್ಮಾರ್ಕ್, ಇಥಿಯೋಪಿಯಾ, ಕೆನ್ಯಾ, ಸ್ಪೇನ್ ಹಾಗೂ ಜಪಾನ್ನ ಸೇರಿದಂತೆ ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.