ಅಹಮದಾಬಾದ್: ಅಪೂರ್ವ ಆಟ ಆಡಿದ ಪುಣೆ 7 ಏಸಸ್ ತಂಡ ಪ್ರೀಮಿ ಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ದಿ ಅರೆನಾ ಬೈ ಎಸ್.ಇ. ಟ್ರಾನ್ಸ್ಸ್ಟೇಡಿಯಾದಲ್ಲಿ ಭಾನುವಾರ ನಡೆದ ಪೈಪೋಟಿಯಲ್ಲಿ ಪುಣೆ ಏಸಸ್ 6–0 ರಿಂದ ಡೆಲ್ಲಿ ಡ್ಯಾಷರ್ಸ್ ತಂಡವನ್ನು ಪರಾಭವಗೊಳಿಸಿತು.

ದಿನದ ಇನ್ನೊಂದು ಹೋರಾಟದಲ್ಲಿ ಹೈದರಾಬಾದ್ ಹಂಟರ್ಸ್ 4–3ರಿಂದ ಆತಿಥೇಯ ಅಹಮದಾಬಾದ್ ಸ್ಮ್ಯಾಷ್ ಮಾಸ್ಟರ್ಸ್ ತಂಡವನ್ನು ಮಣಿಸಿತು.

ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಸ್ಮ್ಯಾಷ್ ಮಾಸ್ಟರ್ಸ್ ತಂಡದ ಡರೆನ್ ಲೀವ್ ಮತ್ತು ವಿಕ್ಟರ್ ಆ್ಯಕ್ಸಲ್ಸನ್ ಗೆದ್ದರು. ಮಿಶ್ರ ಡಬಲ್ಸ್, ಮಹಿಳೆಯರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ನಲ್ಲಿ ಪ್ರಾಬಲ್ಯ ಮೆರೆದ ಹಂಟರ್ಸ್ ಗೆಲುವಿನ ತೋರಣ ಕಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.