ನವದೆಹಲಿ: ವಿಶ್ವ ಚಾಂಪಿಯನ್ಷಿಪ್ನಲ್ಲಿ ಆರು ಚಿನ್ನದ ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಮೇರಿ ಕೋಮ್ ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನಕ್ಕೆ ಗುರಿ ಇರಿಸಿ ಅಭ್ಯಾಸ ಆರಂಭಿಸಿದ್ದಾರೆ. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಷಯವನ್ನು ತಿಳಿಸಿದರು.

ಕಳೆದ ವಾರ ಮುಕ್ತಾಯಗೊಂಡ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ 48 ಕೆ.ಜಿ ವಿಭಾಗದಲ್ಲಿ 36 ವರ್ಷದ ಮೇರಿ ಚಿನ್ನ ಗೆದ್ದಿದ್ದರು. ಇದು ಅವರ ಆರನೇ ಚಿನ್ನ ಮತ್ತು ಒಟ್ಟಾರೆ ಏಳನೇ ಪದಕ ಆಗಿತ್ತು.

‘2012ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದೆ. ಆದರೆ ಇಲ್ಲಿಯ ವರೆಗೆ ಚಿನ್ನ ಗೆಲ್ಲಲು ಆಗದೇ ಇರುವುದು ಬೇಸರ ತಂದಿದೆ. ವಿಶ್ವ ಚಾಂಪಿಯನ್ಷಿಪ್ನಲ್ಲಿ ಮಾಡಿರುವ ಸಾಧನೆ ಒಲಿಂಪಿಕ್ಸ್ನಲ್ಲಿ ಚಿನ್ನ ಗಳಿಸುವ ಉತ್ಸಾಹಕ್ಕೆ ಬಲ ತುಂಬಿದೆ. ಟೋಕಿಯೊ ಒಲಿಂಪಿಕ್ಸ್ಗಾಗಿ ಈಗ ಮಾಡುತ್ತಿರುವುದಕ್ಕಿಂತ ಮೂರು ಪಟ್ಟು ಹೆಚ್ಚು ಅಭ್ಯಾಸ ಮಾಡಲು ಸಿದ್ಧ’ ಎಂದು ಮೇರಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ‘ಮೇರಿ ಕೋಮ್ ದೇಶದ ಆಸ್ತಿ’ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.