ತಾಷ್ಕಂಟ್: ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ ವಿಶ್ವ ದಾಖಲೆ ಬರೆದು ಇಲ್ಲಿ ನಡೆಯುತ್ತಿರುವ ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು. ಒಟ್ಟು 205 ಕೆಜಿ ಭಾರ ಎತ್ತಿದ ಅವರು ಒಲಿಂಪಿಕ್ಸ್ ಟಿಕೆಟ್ ಕೂಡ ಗಿಟ್ಟಿಸಿಕೊಂಡರು.

ಸ್ನ್ಯಾಚ್ನಲ್ಲಿ 86 ಕೆಜಿ ಎತ್ತಿದ ಚಾನು ಅವರು ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 119 ಕೆಜಿ ಎತ್ತಿದರು. ಈ ಹಿಂದಿನ ವಿಶ್ವ ದಾಖಲೆ 118 ಕೆಜಿ ಆಗಿತ್ತು. ಕಳೆದ ವರ್ಷ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ 49 ಕೆಜಿ ವಿಭಾಗದಲ್ಲಿ 203 ಕೆಜಿ ಎತ್ತಿದ್ದ ಅವರು ಜೀವನಶ್ರೇಷ್ಠ ಸಾಧನೆ ಮಾಡಿದ್ದರು. ಈಗ ಅದನ್ನೂ ಉತ್ತಮಪಡಿಸಿಕೊಂಡಿದ್ದಾರೆ.

ಸ್ನ್ಯಾಚ್ನಲ್ಲಿ ವಿಶ್ವ ದಾಖಲೆ ಬರೆದ ಚೀನಾದ ಹೊವ್ ಜಿಹುಯಿ ಒಟ್ಟು 213 ಕೆಜಿ ಎತ್ತಿ ಚಿನ್ನದ ಪದಕ ಗಳಿಸಿದರು. ಜಿಯಾಂಗ್ ಹುಯಿವಾ 207 ಕೆಜಿ ಸಾಮರ್ಥ್ಯದೊಂದಿಗೆ ಬೆಳ್ಳಿ ಪದಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.