ಬೆಂಗಳೂರು: ಕರ್ನಾಟಕದ ಪ್ರಿಯಾ ಮೋಹನ್ ಮತ್ತು ಪಾವನಾ ನಾಗರಾಜ್ ಅವರು ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಶನಿವಾರ ನಡೆದ ಹೈಜಂಪ್ ಸ್ಪರ್ಧೆಯಲ್ಲಿ ಪಾವನಾ 1.73 ಮೀಟರ್ಸ್ ಸಾಧನೆಯೊಂದಿಗೆ ಅಗ್ರಸ್ಥಾನ ಗಳಿಸಿದರು. ರಾಜಸ್ಥಾನದ ನಿರ್ಮಾ ಕಿಚಡ್ (1.61 ಮೀ.) ಮತ್ತು ಕೇರಳದ ಕರೋಲಿನಾ ಮ್ಯಾಥ್ಯೂ (1.58 ಮಿ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

400 ಮೀ. ಓಟದಲ್ಲಿ ಪ್ರಿಯಾ 53.94 ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ವರ್ಣಪದಕ ಗಳಿಸಿದರು. ಆಂಧ್ರಪ್ರದೇಶದ ಕುಂಜಾ ರಜಿತಾ (54.32 ಸೆ.) ಬೆಳ್ಳಿ ಮತ್ತು ಹರಿಯಾಣದ ಸಮ್ಮಿ (55.11 ಸೆ.) ಕಂಚು ಗೆದ್ದರು.

ಹೀನಾ ದಾಖಲೆ: ಪಶ್ಚಿಮ ಬಂಗಾಳದ ರೆಜೊನಾ ಮಲಿಕ್ ಹೀನಾ ಅವರು 16 ವರ್ಷದೊಳಗಿನವರ 300 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದರು. 38.57 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಕಳೆದ ವರ್ಷ ಕರ್ನಾಟಕದ ಉನ್ನತಿ ಅಯ್ಯಪ್ಪ ನಿರ್ಮಿಸಿದ್ದ ದಾಖಲೆಯನ್ನು (40.11 ಸೆ.) ಮೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.