ಮಂಗಳೂರು: ವಿವಾ ವೆಂಚರ್ಸ್ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ಸ್ಪೋರ್ಟ್ಸ್ ಡೆನ್ ಆಯೋಜಿಸಲಿರುವ ಅಖಿಲ ಭಾರತ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಡಿ. 9ರಿಂದ 11ರವರೆಗೆ ನಗರದಲ್ಲಿ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯು.ಎಸ್ ಮಲ್ಯ ಅಂಗಣದಲ್ಲಿ ನಡೆಯಲಿರುವ ಟೂರ್ನಿಯಲ್ಲಿ 9ರಿಂದ 65 ವರ್ಷದ ವರೆಗಿನವರು ವಿಭಿನ್ನ ವಯೋಮಾನ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಡೆನ್ ಸಂಸ್ಥೆಯ ನಿರ್ದೇಶಕ ಗಣೇಶ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸ್ಪರ್ಧೆಗಳು ನಡೆಯಲಿವೆ. ಒಟ್ಟು ₹ 2 ಲಕ್ಷ ಮೊತ್ತದ ನಗದು ಬಹುಮಾನ ಮತ್ತು ಪದಕಗಳನ್ನು ನೀಡಲಾಗುವುದು ಎಂದರು. ಪ್ರವೇಶ ಪತ್ರಗಳನ್ನು 8884409014 ಅಥವಾ 8095810030ಗೆ ಕಳುಹಿಸಬೇಕು. ಮಾಹಿತಿಗೆ denzsports@gmail.com ಸಂಪರ್ಕಿಸುವಂತೆ ಅವರು ತಿಳಿ ಸಿದರು. ವಿವಾ ವೆಂಚರ್ಸ್‌ನ ನಿರ್ದೇಶಕ ಡೆನ್ಝಿಲ್ ಫರ್ನಾಂಡಿಸ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.