ಭೋಪಾಲ್: ಅಂಜುಮ್ ಮೌದ್ಗಿಲ್ ಇಲ್ಲಿ ನಡೆಯುತ್ತಿರುವ 63ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿ ಯನ್ಷಿಪ್ನ ಮಹಿಳೆಯರ 50 ಮೀಟರ್ಸ್ ರೈಫಲ್ ತ್ರಿ ಪೊಸಿಷನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಅವರು ಸತತ ಮೂರನೇ ವರ್ಷ ಈ ಪದಕ ಜಯಿಸಿದ್ದಾರೆ.

ಅಂಜುಮ್ ಅರ್ಹತಾ ಸುತ್ತಿನಲ್ಲಿ 1172 ಪಾಯಿಂಟ್ಸ್ ಗಳಿಸಿದರು. ಹರಿಯಾಣದ ರಾಜ್ ಚೌಧರಿ 1164 ಅಂಕ ಗಳಿಸಿದರು.

ಫೈನಲ್ನಲ್ಲಿ 449.9 ಪಾಯಿಂಟ್ಸ್ ಗಳಿಸಿದ ಅಂಜುಮ್ ಚಿನ್ನದ ಪದಕ ಗೆದ್ದರು. ಅವರಿಗಿಂತ 2.6 ಪಾಯಿಂಟ್ಸ್ ಕಡಿಮೆ ಗಳಿಸಿದ ತಮಿಳುನಾಡಿನ ಎನ್. ಗಾಯತ್ರಿ ಬೆಳ್ಳಿ ಪದಕಕ್ಕೆ ತೃಪ್ತಿಪಡೆದುಕೊಂಡರು.

ಬುಧವಾರ ನಡೆದ 10 ಮೀಟರ್ಸ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಚಿನ್ನದ ಸಾಧನೆ ಮಾಡಿದರು. ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರ ತಂಡವು ಜೂನಿಯರ್ ಮಿಶ್ರ ತಂಡ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.