ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 52 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ಅವರನ್ನು ಮಣಿಸಿದ ಭಾರತದ ನಿಖತ್ ಜರೀನ್, ಎರಡನೇ ಬಾರಿಗೆ ಚಾಂಪಿಯನ್ ಎನಿಸಿದರು.

ನಿಖತ್ ಅವರು ಗುಯೆನ್ ವಿರುದ್ಧ 5–0 ಅಂತರದ ಜಯ ಸಾಧಿಸಿದರು.

ಈ ಹಿಂದೆ ಮೇರಿ ಕೋಮ್ ಅವರು ಆರು ಬಾರಿ (2002, 2005, 2006, 2008, 2010 ಹಾಗೂ 2018) ವಿಶ್ವ ಚಾಂಪಿಯನ್ ಆಗಿದ್ದರು. ಅವರನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚುಸಲ ಚಾಂಪಿಯನ್ ಆದ ಬಾಕ್ಸರ್ ಎಂಬ ಖ್ಯಾತಿ ಇದೀಗ ನಿಖತ್ ಅವರದ್ದಾಯಿತು. ಸರಿತಾ ದೇವಿ (2006), ಜೆನ್ನಿ ಆರ್.ಎಲ್. (2006) ಹಾಗೂ ಲೇಖಾ ಕೆ.ಸಿ. (2006) ಅವರು ಒಂದೊಂದು ಬಾರಿ ಚಾಂಪಿಯನ್ ಆಗಿದ್ದರು.

ಭಾರತದವರೇ ಆದ ನೀತು ಗಂಗಾಸ್ (48ಕೆ.ಜಿ. ವಿಭಾಗ) ಹಾಗೂ ಸ್ವೀಟಿ ಬೂರಾ (81ಕೆ.ಜಿ. ವಿಭಾಗ) ಶನಿವಾರ ನಡೆದ ಹಣಾಹಣಿಗಳಲ್ಲಿ ಚಾಂಪಿಯನ್ ಆಗಿದ್ದರು.

ಇದನ್ನೂ ಓದಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್: ನೀತು, ಸ್ವೀಟಿ ಚಿನ್ನದ ಪಂಚ್

ಇದೇ ದಿನ ನಡೆಯುವ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.