ಬೆಂಗಳೂರು: ಆಗ್ರಾದ ಸಂಜಯ್ ನೇಗಿ ಮತ್ತು ಸಿಂಗಪುರದ ಐ ಪಿಂಗ್ ಯೋ ಅವರು ಟಿವಿಎಸ್ ಅಪಾಚಿ ಸ್ಪಾರ್ಟಾನ್ ಆಶ್ರಯದಲ್ಲಿ ಭಾನುವಾರ ನಡೆದ ಆಬ್ಸ್ಟಕಲ್ ಕೋರ್ಸ್ ರೇಸ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಸಂಜಯ್ 25 ನಿಮಿಷ 25 ಸೆಕೆಂಡ್ನಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಗಳಿಸಿದರೆ, ಬೆಂಗಳೂರಿನ ಯಧುಕೃಷ್ಣನ್ ಎಂ (29:49) ಮತ್ತು ಚೆನ್ನೈನ ಎ.ಬಿ. ವಿಕ್ಟರ್ (31:09) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಪಿಂಗ್ 37 ನಿಮಿಷ 24 ಸೆಕೆಂಡ್ನಲ್ಲಿ ಗುರಿ ಮುಟ್ಟಿದರು. ದೆಹಲಿಯ ಏಕ್ತಾ ರಾವತ್ (38:36) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಮಿಸ್ಟಿ ಮೊಕ್ರೊಸ್ (39:26) ಮೂರನೇ ಸ್ಥಾನ ಪಡೆದರು.

ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಸ್ಪರ್ಧಿಗಳು ನಗದು ಬಹುಮಾನಗಳೊಂದಿಗೆ ಟಿವಿಎಸ್ ಅಪಾಚಿ ಆರ್ಟಿಆರ್ 200 ಬೈಕ್ ಬಹುಮಾನ ಪಡೆದರು.

ಬೆಂಗಳೂರಿನ ಎಂಬೆಸಿ ಇಂಟರ್ನ್ಯಾಷನಲ್ ರೈಡಿಂಗ್ ಸ್ಕೂಲ್ನಲ್ಲಿ ನಡೆದ ರೇಸ್ನಲ್ಲಿ ಅಮೆರಿಕ, ಸಿಂಗಪುರ, ಡೆನ್ಮಾರ್ಕ್, ಬ್ರಿಟನ್, ಫಿಲಿಪೀನ್ಸ್, ಇಟಲಿ, ಮೆಕ್ಸಿಕೊ ಸೇರಿದಂತೆ 12 ದೇಶಗಳಿಂದ 2000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ರೇಸ್ 20 ಅಡೆತಡೆ ಒಳಗೊಂಡಂತೆ 5 ಕಿ.ಮೀ. ದೂರವಿತ್ತು.

‘ಭಾರತದಲ್ಲಿ ಮೊದಲ ಬಾರಿ ಆಯೋಜಿಸಿದ್ದ ಆಬ್ಸ್ಟಕಲ್ ಕೋರ್ಸ್ ರೇಸ್ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಮ್ಮ ನಿರೀಕ್ಷೆಗೆ ಮೀರಿ ರೇಸರ್ಗಳು ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಉತ್ಸಾಹದಿಂದ ಪಾಲ್ಗೊಂಡರು’ ಎಂದು ಟಿವಿಎಸ್ ಅಪಾಚಿ ಸ್ಪಾರ್ಟಾನ್ ರೇಸ್ ಅನ್ನು ಭಾರತದಲ್ಲಿ ಪರಿಚಯಿಸುತ್ತಿರುವ ಪಿಎಂಜಿ ಸ್ಪೋರ್ಟ್ಸ್ನ ಸಿಇಒ ಮಲ್ರಾಯ್ ಡಿಸೋಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.