ಮ್ಯಾಡ್ರಿಡ್: ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೊಲಿನಾ ಮರಿನ್ ಅವರು ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.

ಕಳೆದ ವಾರ ನಡೆದ ತರಬೇತಿ ಅವಧಿಯಲ್ಲಿ 27 ವರ್ಷದ ಕ್ಯಾರೊಲಿನಾ ಮರಿನ್ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.

‘ಇದು ನಾನು ಎದುರಿಸಬೇಕಾದ ಮತ್ತೊಂದು ಸವಾಲಾಗಿದೆ. ಆದರೆ, ನಾನು ಖಂಡಿತವಾಗಿಯೂ ಅದಷ್ಟು ಬೇಗ ಆಟಕ್ಕೆ ಹಿಂತಿರುಗುತ್ತೇನೆ’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಮರಿನ್ ಬರೆದಿದ್ದಾರೆ.

ಮೂರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮರಿನ್, 2019ರಲ್ಲಿ ಬಲಗಾಲಿನ ಎಸಿಎಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮರಿನ್, ಕಳೆದ ತಿಂಗಳು ಸತತ ಐದನೇ ಬಾರಿಗೆ ಯುರೋಪಿಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ರಿಯೊ ಡಿ ಜನೈರೊದಲ್ಲಿ ನಡೆದ 2016ರ ಒಲಿಂಪಿಕ್ ಫೈನಲ್‌ನಲ್ಲಿ ಭಾರತದ ಪಿವಿ ಸಿಂಧು ಅವರನ್ನುಕ್ಯಾರೊಲಿನಾ ಮರಿನ್ ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.