ಲಖನೌ:ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯು ಏಜಿಸ್ ಫೆಡರಲ್ ಲೈಫ್ ಇನ್ಶುರೆನ್ಸ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ, ಭಾರತದ ಪ್ಯಾರಾ-ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಗೌರವ್ ಖನ್ನಾ ಅವರ ಸಹಯೋಗದೊಂದಿಗೆ ಇಲ್ಲಿ ಆರಂಭಗೊಂಡಿದೆ.

ಸುಧಾರಿತ ಉಪಕರಣಗಳನ್ನೊಳಗೊಂಡ, ಹೈ ಪರ್ಫಾಮೆನ್ಸ್ ಸೆಂಟರ್ ಉಳ್ಳ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಇದಾಗಿದೆ. ಇದೇ ಸಂದರ್ಭದಲ್ಲಿ ಗೌರವ್ ಖನ್ನಾ ಏಜಿಸ್ ಫೆಡರಲ್ ‘ಫೆಸ್ಟ್ ಫಾರ್ ಫಿಯರ್ಲೆಸ್ ಶಟ್ಲರ್ಸ್‘ ಕಾರ್ಯಕ್ರಮವನ್ನು ಉದ್ಘಾಟಿಸಿದರು. 2028 ಮತ್ತು 2032ರ ಪ್ಯಾರಾಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡು ಹೊಸ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಕಾರ್ಯಕ್ರಮ ಇದಾಗಿದೆ.

ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯ ಹೈ ಪರ್ಫಾಮೆನ್ಸ್ ಕೇಂದ್ರ, ನಾಲ್ಕು ಅಂಗಣಗಳು, ಬಿಡಬ್ಲ್ಯೂಎಫ್ ಅನುಮೋದಿತ ಎರಡು ಸಿಂಥೆಟಿಕ್ ಮ್ಯಾಟ್ಸ್ ಮತ್ತು ವೀಲ್ ಚೇರ್ ಅಥ್ಲೀಟ್‌ಗಳಿಗಾಗಿ ಎರಡು ವುಡನ್ ಕೋರ್ಟ್‌ಗಳನ್ನು ಒಳಗೊಂಡಿದೆ. ಈ ಅಕಾಡೆಮಿ ಸಂಪೂರ್ಣ ಸುಸಜ್ಜಿತ ಜಿಮ್, ಐಸ್ ಸ್ನಾನ, ಹಬೆ ಸ್ನಾನ, ಹೈಡ್ರೋಥೆರಪಿ ಸೇರಿದಂತೆ ಅಥ್ಲೀಟ್‌ಗಳಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳ ಜೊತೆಗೆ, ಕ್ರೀಡಾಪಟುಗಳ ವಾಸ್ತವ್ಯಕ್ಕೆ ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ.

ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಪಟುಗಳಾದ ಪ್ರಮೋದ್ ಭಗತ್, ಮನೋಜ್ ಸರ್ಕಾರ್, ನಿತೇಶ್ ಕುಮಾರ್, ಕೃಷ್ಣ ನಗರ್, ನಿತ್ಯಾಶ್ರೀ ಮತ್ತು ಪಲಕ್ ಕೊಹ್ಲಿ ಪಾಲ್ಗೊಂಡಿದ್ದರು. ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಪ್ರಮೋದ್ ಭಗತ್ ಮತ್ತು ಕೃಷ್ಣಸಾಗರ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಸುಹಾಸ್ ಯತಿರಾಜ್ ಮತ್ತು ಮನೋಜ್ ಸರ್ಕಾರ್ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಗೆದ್ದಿದ್ದರು. ಇವರೆಲ್ಲರ ಜೊತೆ ಕನಿಷ್ಠ 50 ಕ್ರೀಡಾಪಟುಗಳು ಈ ಅಕಾಡೆಮಿಯಲ್ಲಿ ತರಬೇತಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.