ಅಪಿಯಾ, ಸಮೊವಾ: ಭಾರತದ ಪರ್ದೀಪ್ ಸಿಂಗ್ ಅವರು ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಶನಿವಾರ ಚಿನ್ನ ಗೆದ್ದರು.

109 ಕೆಜಿ ವಿಭಾಗದ ಕ್ಲೀನ್ ಮತ್ತು ಜೆರ್ಕ್ನಲ್ಲಿ ಒಟ್ಟು 350 ಕೆಜಿ (202 + 148) ಭಾರ ಎತ್ತುವ ಮೂಲಕ ಪರ್ದೀಪ್ ಸ್ವರ್ಣಪದಕಕ್ಕೆ ಮುತ್ತಿಟ್ಟರು. ಜಲಂಧರ್ನ ಈ ವೇಟ್ಲಿಫ್ಟರ್ 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ (105 ಕೆಜಿ ವಿಭಾಗ) ಗೆದ್ದಿದ್ದರು. ಅಲ್ಲದೆ 2019ರ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ 102 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ವಿಕಾಸ್ ಠಾಕೂರ್ ಅವರು 96 ಕೆಜಿ ವಿಭಾಗದಲ್ಲಿ ಕರಾಮತ್ತು ತೋರಿದರು. ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ವಿಕಾಸ್ ಒಟ್ಟು 338 ಕೆಜಿ (153+185) ಭಾರ ಎತ್ತಿದರು.

ಲೂಧಿಯಾನದ ವಿಕಾಸ್, 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ 85 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಗೋಲ್ಡ್ಕೋಸ್ಟ್ನಲ್ಲಿ ನಡೆದ 2018ರ ಕೂಟದಲ್ಲಿ 94 ಕೆಜಿ ವಿಭಾಗದಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದರು.

ಶನಿವಾರ ಚಾಂಪಿಯನ್ಷಿಪ್ನ ಕೊನೆಯ ದಿನವಾಗಿತ್ತು. ಯೂಥ್, ಜೂನಿಯರ್ ವಿಭಾಗಗಳು ಸೇರಿದಂತೆ ಭಾರತ ಒಟ್ಟಾರೆ 35 ಪದಕಗಳನ್ನು ಕೂಟದಲ್ಲಿ ಬಾಚಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.