ಪ್ಯಾರಿಸ್: ಭಾರತದ ಬಿಲ್ಗಾರ್ತಿ ಭಜನ್ ಕೌರ್ ಅವರು ಮಂಗಳವಾರ ಒಲಿಂಪಿಕ್ಸ್ನ ಮಹಿಳೆಯರ ಆರ್ಚರಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು. ಆದರೆ, ಧೀರಜ್ ಬೊಮ್ಮದೇವರ ಪುರುಷರ ವಿಭಾಗದ ಸ್ಪರ್ಧೆಯಿಂದ ಹೊರಬಿದ್ದರು.

ತಂಡ ವಿಭಾಗದ ಸ್ಪರ್ಧೆಯಲ್ಲಿ ಮಿಂಚಿದ್ದ 18 ವರ್ಷ ವಯಸ್ಸಿನ ಕೌರ್ ಇಲ್ಲೂ ಉತ್ತಮ ಫಾರ್ಮ್ ಮುಂದುವರಿಸಿದರು. ವೈಯಕ್ತಿಕ ಸ್ಪರ್ಧೆಯ ಮೊದಲೆರಡು ಸುತ್ತಿನಲ್ಲಿ ಅವರು ಕ್ರಮವಾಗಿ ಇಂಡೊನೇಷ್ಯಾದ ಸೈಫಾ ನುರಾಫಿಫಾ ಕಮಾಲ್ ಮತ್ತು ಪೋಲೆಂಡ್ನ ವಿಯೊಲೆಟಾ ಮೈಸ್ಜೋರ್ ಅವರನ್ನು ಸೋಲಿಸಿದರು. ಶನಿವಾರ ನಡೆಯಲಿರುವ 16ರ ಸುತ್ತಿನ ಪಂದ್ಯದಲ್ಲಿ ಭಜನ್ ಅವರು ಇಂಡೊನೇಷ್ಯಾದ ದಿಯಾನಂದ ಚೊಯಿರುನಿಸಾ ಅವರನ್ನು
ಎದುರಿಸಲಿದ್ದಾರೆ.

ನಾಲ್ಕನೇ ಶ್ರೇಯಾಂಕದ ಧೀರಜ್ ಅವರು ಮೊದಲ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಆಡಮ್ ಲಿ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ಕೆನಡಾದ ಎರಿಕ್ ಪೀಟರ್ಸ್ ವಿರುದ್ಧ ಸೋಲು ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.