ಪ್ಯಾರಿಸ್: ಆರಂಭದಲ್ಲಿ ಕ್ರಿಕೆಟಿಗನಾಗುವ ಕನಸು ಕಂಡಿದ್ದೆ. ಆದರೆ, ಆಕಸ್ಮಿಕವಾಗಿ ಜಾವೆಲಿನ್ ಕೈಗೆತ್ತಿಕೊಂಡೆ ಎಂದು ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಂ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ನ ಚಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

'ಆರಂಭದಲ್ಲಿ ನಾನು ಕ್ರಿಕೆಟರ್ ಆಗಿದ್ದೆ, ಟೇಬಲ್ ಟೆನಿಸ್ ಆಡುತ್ತಿದ್ದೆ. ಅಥ್ಲೆಟಿಕ್ಸ್ ವಿಭಾದಲ್ಲಿಯೂ ಸ್ಪರ್ಧಿಸುತ್ತಿದ್ದೆ. ಆದರೆ, ನಾನು ಜಾವೆಲಿನ್ ಥ್ರೋಗೆ ತಕ್ಕಂತಹ ಮೈಕಟ್ಟು ಹೊಂದಿರುವುದಾಗಿ ನನ್ನ ಕೋಚ್ ಹೇಳಿದ್ದರು. ಅದಾದ ನಂತರ 2016ರಿಂದ ಈಚೆಗೆ ಜಾವೆಲಿನ್ನತ್ತ ಚಿತ್ತ ಹರಿಸಿದೆ' ಎಂದು ವಿವರಿಸಿದ್ದಾರೆ.

'ಜಾವೆಲಿನ್ ಥ್ರೋಗಿಂತಲೂ ವೇಗದ ಬೌಲರ್ನಂತಹ ಕೌಶಲ ಹೊಂದಿರುವುದಾಗಿ ಜನರು ಮಾತನಾಡುತ್ತಾರೆ. ಆದರೆ, ನನ್ನ ಆ್ಯಕ್ಷನ್ ಹಾಗೂ ಓಟದ ಶೈಲಿ ಬಗ್ಗೆ ಖುಷಿಯಿದೆ. ನಾನು ಈ ಮೊದಲು ಬೌಲರ್ (ಕ್ರಿಕೆಟಿಗ) ಆಗಿದ್ದುದ್ದರ ಬಳುವಳಿ ಅವು' ಎಂದಿದ್ದಾರೆ.

ನದೀಂ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಗ್ರಾಮವರು. ಆರಂಭದ ದಿನಗಳಲ್ಲಿ ಅವರಿಗೆ ಊರಿನವರು ಸಾಕಷ್ಟು ನೆರವು ನೀಡಿದ್ದಾರೆ. ಅದರಿಂದಾಗಿಯೇ ನದೀಂಗೆ ತಮ್ಮ ದೇಶದ ಪರ ಹೊಸ ಮೈಲುಗಲ್ಲುಗಳನ್ನು ಮುಟ್ಟಲು ಸಾಧ್ಯವಾಗಿದೆ.
.ನೀರಜ್ ಜೊತೆಗಿನ ಪೈಪೋಟಿ ಭಾರತ, ಪಾಕಿಸ್ತಾನ ಯುವಕರನ್ನು ಹುರಿದುಂಬಿಸಲಿದೆ: ನದೀಂ.Paris Olympics | ಜಾವೆಲಿನ್ ಥ್ರೋ: ರಜತ ರಥವೇರಿದ ನೀರಜ್, ನದೀಂಗೆ ಚಿನ್ನದ ಕಿರೀಟ.
'ನಾನು ಕೃಷಿ ಪ್ರಧಾನ ಹಳ್ಳಿಯವನು. ಪ್ರತಿ ಸಲ ಪದಕ ಗೆದ್ದಾಗಲೂ ನನ್ನ ಊರಿನ ಬಗ್ಗೆ ಯೋಚಿಸುತ್ತೇನೆ. ಅದು ನನಗೆ ಇನ್ನಷ್ಟು ಉತ್ತೇಜನ ನೀಡುತ್ತದೆ. ಹಾಗಾಗಿಯೇ ನನ್ನಲ್ಲಿನ್ನೂ ವಿನಮ್ರತೆ ಉಳಿದಿದೆ. ಆ ಕಾರಣಕ್ಕಾಗಿಯೇ ಇನ್ನಷ್ಟು ಯಶಸ್ಸು ಸಾಧಿಸುವ ಬಯಕೆ ಹೊಂದಿದ್ದೇನೆ. ಈ ಹಂತಕ್ಕೆ ಬದಲು ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ದಾಟಬೇಕಾಯಿತು' ಎಂದೂ ಸ್ಮರಿಸಿದ್ದಾರೆ.

ಒಲಿಂಪಿಕ್ಸ್ ದಾಖಲೆ

ಗುರುವಾರ ತಡರಾತ್ರಿ ನಡೆದ ಫೈನಲ್ನಲ್ಲಿ 92.97 ಮೀ. ದೂರ ಚಾವೆಲಿನ್ ಎಸೆಯುವ ಮೂಲಕ ಅರ್ಷದ್ ಅವರು ಒಲಿಂಪಿಕ್ಸ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. 2008ರಲ್ಲಿ ನಾರ್ವೆಯ ಆ್ಯಂಡ್ರಿಯಾಸ್ ಥಾರ್ಕಿಲ್ಡ್ಸೆನ್ ಅವರು 90.57 ಮೀ. ಎಸೆದಿದ್ದದ್ದು ಇದುವರೆಗೆ ದಾಖಲೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.