ನವದೆಹಲಿ: ಪಾರ್ಥವಿ ಗ್ರೇವಾಲ್, ವಂಶಿಕಾ ಗೋಸ್ವಾಮಿ ಮತ್ತು ಹೇಮಂತ್ ಸಂಗ್ವಾನ್ ಅವರು ಅಮೆರಿಕದ ಕೊಲರಾಡೊದಲ್ಲಿ ವಿಶ್ವ ಬಾಕ್ಸಿಂಗ್ ಆಶ್ರಯದಲ್ಲಿ ಶನಿವಾರ ವಿಶ್ವ 19 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಮೊದಲ ಬಾರಿಗೆ ನಡೆದ ಈ ಚಾಂಪಿಯನ್ಷಿಪ್ನಲ್ಲಿ ಭಾರತ 4 ಚಿನ್ನ ಸೇರಿ 17 ಪದಕಗಳನ್ನು ಗೆದ್ದುಕೊಂಡು ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ.

ಎಂಟು ದಿನಗಳ ಈ ಚಾಂಪಿಯನ್ಷಿಪ್ನಲ್ಲಿ ಭಾರತದ ಮಹಿಳೆಯರ ಪ್ರದರ್ಶನ ಉತ್ತಮವಾಗಿದ್ದು, 10 ಮಂದಿ ಪದಕ ಗೆದ್ದರು.

ಪಾರ್ಥವಿ, ಮಹಿಳೆಯರ 65 ಕೆ.ಜಿ. ವಿಭಾಗದ ಫೈನಲ್ನಲ್ಲಿ 5–0 ಯಿಂದ ನೆದರ್ಲೆಂಡ್ಸ್ನ ಆಲಿಯಾ ಹೊಪ್ಪೆಮಾ ವಿರುದ್ಧ ಜಯಗಳಿಸಿದರು. ವಂಶಿಕಾ, ಮಹಿಳೆಯರ +80 ಕೆ.ಜಿ. ವಿಭಾಗದ ಫೈನಲ್ನಲ್ಲಿ ಜರ್ಮನಿಯ ವಿಕ್ಟೋರಿಯಾ ಗಾಟ್ ವಿರುದ್ಧ ಆರ್ಎಸ್ಸಿ (ರೆಫ್ರಿ ಸ್ಟಾಪ್ಸ್ ಕಂಟೆಸ್ಟ್) ಆಧಾರದಲ್ಲಿ 1ನಿಮಿಷ 37 ಸೆಕೆಂಡುಗಳ ಸೆಣಸಾಟ ಗೆದ್ದರು.

ಹೇಮಂತ್, ಪುರುಷರ 90 ಕೆ.ಜಿ. ವಿಭಾಗದ ಫೈನಲ್ನಲ್ಲಿ ಅಮೆರಿಕದ ರಿಶೊನ್ ಸಿಮ್ಸ್ ವಿರುದ್ಧ 4–1 ವಿಭಜಿತ ತೀರ್ಪಿನ ಆಧಾರದಲ್ಲಿ ಜಯಗಳಿಸಿದರು.

ನಿಶಾ (51 ಕೆ.ಜಿ), ಸುಪ್ರಿಯಾ ದೇವಿ ಥಾಕೋಮ್ (54 ಕೆ.ಜಿ) ಮತ್ತು ಕೃತಿಕಾ ವಾಸನ್ (80 ಕೆ.ಜಿ) ಅವರು ತಮ್ಮ ವಿಭಾಗದ ಫೈನಲ್ನಲ್ಲಿ ಸೋತರು ಬೆಳ್ಳಿ ಪದಕಗಳಿಗೆ ತೃಪ್ತಿ ಪಡಬೇಕಾಯಿತು.

ಪದಕ ವಿಜೇತರು:

ಚಿನ್ನ: ಕೃಷಾ ವರ್ಮಾ (75 ಕೆಜಿ ವಿಭಾಗ, ಪಾರ್ಥವಿ ಗ್ರೇವಾಲ್ (65 ಕೆ.ಜಿ ವಿಭಾಗ), ವಂಶಿಕಾ ಗೋಸ್ವಾಮಿ (+80 ಕೆ.ವಿ. ವಿಭಾಗ). ಹೇಮಂತ್ ಸಂಗ್ವಾನ್ (ಪುರುಷರ 90 ಕೆ.ಜಿ. ವಿಭಾಗ).

ಬೆಳ್ಳಿ: ನಿಶಾ (51 ಕೆ.ಜಿ ವಿಭಾಗ), ಸುಪ್ರಿಕಾ ದೇವಿ ಥಾಕೋಮ್ (54 ಕೆ.ಜಿ ವಿಭಾಗ), ಕೃತಿಕಾ ವಾಸನ್ (80 ಕೆ.ಜಿ. ವಿಭಾಗ), ಚಂಚಲ್ ಚೌಧರಿ (48 ಕೆ.ಜಿ. ವಿಭಾಗ), ಅಂಜಲಿ ಸಿಂಗ್ (57 ಕೆ.ಜಿ. ವಿಭಾಗ, ವಿನಿ (60 ಕೆ.ಜಿ. ವಿಭಾಗ), ಅಕಾನ್ಶಾ ಫಾಲಸ್ವಾಲ್ (70 ಕೆ.ಜಿ. ವಿಭಾಗ), ರಾಹುಲ್ ಕುಂದು (ಪುರುಷರ 75 ಕೆ.ಜಿ. ವಿಭಾಗ).

ಕಂಚು: ರಿಶಿ ಸಿಂಗ್ (50 ಕೆ.ಜಿ ವಿಭಾಗ) ಕೃಷ್ ಪಾಲ್ (55 ಕೆ.ಜಿ. ವಿಭಾಗ), ಸುಮಿತ್ (70 ಕೆ.ಜಿ. ವಿಭಾಗ), ಆರ್ಯನ್ (ಪುರುಷರ 85 ಕೆಜಿ. ವಿಭಾಗ), ಲಕ್ಷಯ್ ರಾಥಿ (+90 ಕೆ.ಜಿ ವಿಭಾಗ). ಎಲ್ಲರೂ ಪುರುಷರ ವಿಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.