ಆಕ್ಲೆಂಡ್: ಎರಡನೇ ಶ್ರೇಯಾಂಕಿತ, ಇಂಡೊನೇಷ್ಯಾ ಆಟಗಾರ ಟೋಮಿ ಸುಗಿಯಾರ್ತೊ ಅವರನ್ನು ಮಣಿಸಿದ ಶ್ರೇಯಾಂಕ ರಹಿತ ಭಾರತದ ಆಟಗಾರ ಎಚ್.ಎಸ್.ಪ್ರಣಯ್ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇರಿಸಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಪ್ರಣಯ್ 21–14, 21–12ರಲ್ಲಿ ಗೆದ್ದರು. ಮತ್ತೊಂದು ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್ ಸೋತು ಹೊರಬಿದ್ದರು. ಚೀನಾದ ಲಿನ್ ಡ್ಯಾನ್ 21–12, 21–12ರಲ್ಲಿ ಪ್ರಣೀತ್ ಅವರನ್ನು ಮಣಿಸಿದರು.

ಪ್ರಣಯ್ ಮತ್ತು ಸುಗಿಯಾರ್ತೊ ಅಂತರರಾಷ್ಟ್ರೀಯ ಪಂದ್ಯವೊಂದರದಲ್ಲಿ ಇದೇ ಮೊದಲ ಬಾರಿ ಮುಖಾಮುಖಿಯಾಗಿದ್ದರು. ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಇಂಡೊನೇಷ್ಯಾ ಆಟಗಾರನನ್ನು 26ನೇ ಕ್ರಮಾಂಕದ ಪ್ರಣಯ್ ಕೇವಲ 37 ನಿಮಿಷಗಳಲ್ಲಿ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅವರು ಜಪಾನ್ನ ಕಂಟಾ ಸುನೆಯಾಮ ಎದುರು ಸೆಣಸಲಿದ್ದಾರೆ.

ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದ ಪ್ರಣಯ್ 7–3ರಲ್ಲಿ ಮುನ್ನಡೆದರು. ನಂತರ ಈ ಅಂತರವನ್ನು 11–4ಕ್ಕೆ ಏರಿಸಿದರು. ನಂತರ ಹಿಂತಿರುಗಿ ನೋಡದ ಭಾರತದ ಆಟಗಾರ ಸುಲಭವಾಗಿ ಗೇಮ್ ಗೆದ್ದರು.

ಎರಡನೇ ಗೇಮ್ನ ಆರಂಭದಲ್ಲಿ ಇಬ್ಬರ ನಡುವೆ ಭಾರಿ ಪೈಪೋಟಿ ಕಂಡುಬಂತು. ಸುಗಿಯಾರ್ತೊ 4–2ರಲ್ಲಿ ಮುನ್ನಡೆದು ಭರವಸೆ ಮೂಡಿಸಿದರು. ತಿರುಗೇಟು ನೀಡಿದ ಪ್ರಣಯ್ ಸಮಬಲ ಸಾಧಿಸಿದ ನಂತರ ಸತತ ಪಾಯಿಂಟ್ಗಳನ್ನು ಕಸಿದುಕೊಂಡರು. ಹೀಗಾಗಿ 8–4ರ ಮುನ್ನಡೆ ಗಳಿಸಲು ಅವರಿಗೆ ಸಾಧ್ಯವಾಯಿತು. ನಂತರ ಗೇಮ್ ಗೆದ್ದ ಪಂದ್ಯ ತಮ್ಮದಾಗಿಸಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗಿ ಬರಲಿಲ್ಲ.

ಮನು ಅತ್ರಿ–ಸುಮೀತ್ ರೆಡ್ಡಿಗೆ ಸೋಲು:ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಮಲೇಷ್ಯಾದ ಗೋಹ್ ವಿ ಶೆಮ್ ಮತ್ತು ಟಾನ್ ವೀ ಕಿಯಾಂಗ್ ಅವರಿಗೆ 17–21, 19–21ರಲ್ಲಿ ಮಣಿದು ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.