ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ 200 ಮೀಟರ್ ಓಟ: ಪ್ರೀತಿ ಪಾಲ್‌ಗೆ ಮತ್ತೊಂದು ಕಂಚು

Published : 1 ಸೆಪ್ಟೆಂಬರ್ 2024, 20:33 IST
Last Updated : 2 ಸೆಪ್ಟೆಂಬರ್ 2024, 2:38 IST
ಫಾಲೋ ಮಾಡಿ
Comments

ಪ್ಯಾರಿಸ್‌: ಭಾರತದ ಪ್ರೀತಿ ಪಾಲ್ ಅವರು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ 200 ಮೀಟರ್‌ ಓಟದಲ್ಲಿ (ಟಿ35 ವಿಭಾಗ) ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಭಾನುವಾರ ನಡೆದ ಸ್ಪರ್ಧೆಯಲ್ಲಿ ಅವರು 30.01 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಗುರಿ ತಲುಪಿದರು. ಈ ಮೂಲಕ ಪ್ರೀತಿ, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

23 ವರ್ಷ ವಯಸ್ಸಿನ ಪ್ರೀತಿ ಶುಕ್ರವಾರ ಮಹಿಳೆಯರ 100 ಮೀಟರ್ಸ್ ಓಟ (ಟಿ35) ವಿಭಾಗದಲ್ಲೂ ಕಂಚಿನ ಪದಕ ಗೆದ್ದಿದ್ದರು. ಅಲ್ಲೂ ವೈಯಕ್ತಿಕ ಉತ್ತಮ ಸಮಯದೊಂದಿಗೆ ( 14.21 ಸೆಕೆಂಡು) ಸಾಧನೆ ಮೆರೆದಿದ್ದರು.

1984ರಿಂದ ಇಲ್ಲಿಯವರೆಗೆ ಭಾರತಕ್ಕೆ ಅಥ್ಲೆಟಿಕ್ಸ್‌ನ ಫೀಲ್ಡ್‌ ಸ್ಪರ್ಧೆಗಳಲ್ಲಿ ಪದಕಗಳು ಒಲಿದಿವೆ. ಆದರೆ, ಟ್ರ್ಯಾಕ್‌ನಲ್ಲಿ ಪ್ರೀತಿ ಮೊದಲ ಪದಕ ಜಯಿಸಿದ್ದರು. ಇದೀಗ ಅದಕ್ಕೆ ಮತ್ತೊಂದು ಪದಕವನ್ನು ಸೇರಿಸಿದ್ದಾರೆ.

ಪ್ರೀತಿ ಅವರು ಉತ್ತರಪ್ರದೇಶದ ಮುಜಾಫರ್‌ನಗರದ ರೈತ ಕುಟುಂಬದವರು. ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT