ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ಬಿಜೆಪಿ ಶಾಸಕ ಮುನಿರತ್ನ ಬಂಧನ

ಗನ್‌ಮ್ಯಾನ್‌, ಆಪ್ತ ಸಹಾಯಕ ಸೇರಿ ಮೂವರ ವಶ
Published : 14 ಸೆಪ್ಟೆಂಬರ್ 2024, 12:44 IST
Last Updated : 14 ಸೆಪ್ಟೆಂಬರ್ 2024, 12:44 IST
ಫಾಲೋ ಮಾಡಿ
Comments
ಕೋಲಾರ ತೋಟದಲ್ಲಿದ್ದ ಮುನಿರತ್ನ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುನಿರತ್ನ ಅವರು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೀಗಾಗಿ ಅಲ್ಲಿನ ರಾಜಕೀಯ ಮುಖಂಡರ ನೆರವು ಪಡೆದು ಆಂಧ್ರಪ್ರದೇಶದತ್ತ ತೆರಳುತ್ತಿದ್ದರು. ಬೆಳಿಗ್ಗೆಯಿಂದಲೇ ಕೋಲಾರ ಜಿಲ್ಲೆಯ ತೋಟವೊಂದರಲ್ಲಿ ತಂಗಿದ್ದರು ಎಂಬುದು ಗೊತ್ತಾಗಿದೆ. ನಂಗಲಿ ಬಳಿ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಕಾರಿನಲ್ಲಿ ಹಿಂಬಾಲಿಸಿ ಬಂಧಿಸಿದ ಪೊಲೀಸರು ಅವರದ್ದೇ ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ದರು. ಪೊಲೀಸರಿಗೆ ಸುಳಿವು ಸಿಗಬಾರದೆಂದು ಶಾಸಕರು ಬೇಸಿಕ್‌ ಮೊಬೈಲ್‌ ಫೋನ್‌ ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮುನಿರತ್ನ ಬಂಧನ ದ್ವೇಷದ ರಾಜಕಾರಣ. ಆ ಧ್ವನಿ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಬಂಧಿಸಬೇಕಿತ್ತು. ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿದ್ದಕ್ಕೆ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿದೆ.
–ಆರ್.ಅಶೋಕ, ವಿರೋಧ ಪಕ್ಷದ ನಾಯಕ
ಬಿಜೆಪಿ ನೋಟಿಸ್‌
ಮುನಿರತ್ನ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ‘ನೀವು ಮಾತನಾಡಿರುವ ಆಡಿಯೊ ಸಂಭಾಷಣೆ ಎಲ್ಲೆಡೆ ಬಿತ್ತರವಾಗಿದೆ. ಈ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ಧಕ್ಕೆ ತಂದಿದೆ. ಈ ಕುರಿತು ಸ್ಪಷ್ಟೀಕರಣ ನೀಡಬೇಕು’ ಎಂದು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸೂಚಿಸಿದ್ದಾರೆ.
‘ಕಾಂಗ್ರೆಸ್‌ ಬಿಟ್ಟಿದ್ದಕ್ಕೆ ಪಿತೂರಿ’
‘ಕಾಂಗ್ರೆಸ್‌ ಬಿಟ್ಟು ಬಂದಾಗಿನಿಂದ ನನ್ನ ವಿರುದ್ಧ ಪಿತೂರಿ ನಡೆದಿತ್ತು. ಈ ಷಡ್ಯಂತ್ರದ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ’ ಎಂದು ಶಾಸಕ ಮುನಿರತ್ನ ಹೇಳಿದರು. ಬಂಧನಕ್ಕೆ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಜಕೀಯ ಪಿತೂರಿಯಿಂದ ದೂರು ನೀಡಿದ್ದಾರೆ. ಚುನಾವಣೆ ಸಮಯದಲ್ಲೂ ಪ್ರಯತ್ನ ನಡೆದಿತ್ತು. ನನ್ನ ರಾಜೀನಾಮೆ ಕೊಡಿಸಿ ಅವರ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಕಾನೂನು ಹೋರಾಟ ನಡೆಸುತ್ತೇನೆ’ ಎಂದರು. ‘ನನ್ನ ವಿರುದ್ಧ ವಿಡಿಯೊ ಮಾಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಆಡಿಯೊ ಮಾಡಿಸಿದ್ದಾರೆ. ಬಾಯಿ ಶುದ್ಧವಾಗಿಯೇ ಇದೆ. ಮುಖ್ಯಮಂತ್ರಿ ಕಡೆಯ ಜನ ಮೊದಲು ಇಂತಹ ಕುತಂತ್ರ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ಶಾಸಕರ ಬೆಂಬಲಿಗರ ಪ್ರತಿಭಟನೆ
ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಮುನಿರತ್ನ ಅವರನ್ನು ವೈಯಾಲಿಕಾವಲ್‌ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಠಾಣೆ ಎದುರು ಜಮಾವಣೆಗೊಂಡಿದ್ದ ಶಾಸಕರ ಬೆಂಬಲಿಗರು ಶಾಸಕರ ಬಂಧನ ಖಂಡಿಸಿ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT