ಅಹಮದಾಬಾದ್: ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವು ತನ್ನ ತವರಿನ ಅಂಗಳದಲ್ಲಿ ಗುರುವಾರ ಜಯಭೇರಿ ಬಾರಿಸಿತು.

ಟ್ರಾನ್ಸ್ ಸ್ಟೇಡಿಯಾ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಫಾರ್ಚೂನ್ ಜೈಂಟ್ಸ್ ತಂಡವು 39–35ರಿಂದ ಯು ಮುಂಬಾ ಎದುರು ಜಯಿಸಿತು.

ಆತಿಥೇಯ ತಂಡದ ಆಟಗಾರ ಕೆ. ಪ್ರಪಂಚನ್ ಒಟ್ಟು ಹತ್ತು ಅಂಕಗಳನ್ನು ಗಳಿಸಿದರು. ಅದರಲ್ಲಿ ಅವರು ಏಳು ಅಂಕಗಳನ್ನು ರೇಡಿಂಗ್‌ನಲ್ಲಿ ಕಬಳಿಸಿದರು. ಮೂರು ಬೋನಸ್ ಅಂಕಗಳನ್ನು ಗಳಿಸಿದರು. ಅವರೊಂದಿಗೆ ಉತ್ತಮ ಆಟ ವಾಡಿದ ಸಚಿನ್ ಒಟ್ಟು ಐದು ಅಂಕಗಳನ್ನು ತಂಡದ ಖಾತೆಗೆ ಸೇರಿಸಿದರು. ಅವರು ರೇಡಿಂಗ್‌ನಲ್ಲಿ ಐದು, ಟ್ಯಾಕಲ್‌ನಲ್ಲಿ ಒಂದು ಮತ್ತು ಒಂದು ಬೋನಸ್ ಅಂಕ ಗಳಿಸಿದರು.

ಮಹೇಂದ್ರ ಗಣೇಶ್ ರಜಪೂತ್ ಅವರೂ ಐದು ಅಂಕದೊಂದಿಗೆ ತಂಡದ ಬಲ ಹೆಚ್ಚಿಸಿದರು. ಟ್ಯಾಕಲ್‌ನಲ್ಲಿ ಮಿಂಚಿದ ಸುನಿಲ್ ಕುಮಾರ್ ಅವರು ಮೂರು ಪಾಯಿಂಟ್ ಗಳನ್ನು ಜೇಬಿಗಿಳಿಸಿಕೊಂಡರು.

ಯು ಮುಂಬಾ ತಂಡದ ಸಿದ್ಧಾರ್ಥ್ ದೇಸಾಯಿ ಮಿಂಚಿದರು. ಅವರು ಒಟ್ಟು 13 ಪಾಯಿಂಟ್ಸ್ ಗಳಿಸಿದರು ಅದರಲ್ಲಿ ಮೂರು ಬೋನಸ್ ಪಾಯಿಂಟ್‌ಗಳು ಸೇರಿದ್ದವು. ರೋಹಿತ್ ಬಲಿಯಾನ್ ರೇಡಿಂಗ್‌ನಲ್ಲಿ ಐದು ಮತ್ತು ಬೋನಸ್ ನಲ್ಲಿ ಒಂದು ಅಂಕ ಪಡೆದರು. ರೋಹಿತ್ ರಾಣಾ, ಸುರೀಂದರ್ ಸಿಂಗ್ ಅವರು ಟ್ಯಾಕಲ್‌ನಲ್ಲಿ ಕ್ರಮವಾಗಿ ಮೂರು ಮತ್ತು ಎರಡು ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.