ಬೆಂಗಳೂರು: ನಾಯಕ ಪವನ್ ಶೆರಾವತ್ ಗಳಿಸಿದ ‘ಸೂಪರ್ 10’ ವ್ಯರ್ಥವಾಯಿತು. ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಭಾನುವಾರ 31–38ರಿಂದ ಪಟ್ನಾ ಪೈರೇಟ್ಸ್ ತಂಡಕ್ಕೆ ಸೋತಿತು.

ವೈಟ್ಫೀಲ್ಡ್ನಹೋಟೆಲ್ ಶೆರಟನ್ ಗ್ರ್ಯಾಂಡ್ನಲ್ಲಿ ನಡೆಯುತ್ತಿರುವ ಟೂರ್ನಿಯ ಹಣಾಹಣಿಯಲ್ಲಿ ಪಟ್ನಾ ತಂಡಕ್ಕೆ ಡಿಫೆಂಡರ್ ಸುನಿಲ್ (9 ಪಾಯಿಂಟ್ಸ್) ಮತ್ತು ರೇಡರ್ಗಳಾದ ಸಚಿನ್ (8) ಮತ್ತು ಗುಮನ್ ಸಿಂಗ್ (7) ಗೆಲುವು ತಂದುಕೊಟ್ಟರು.

ಬೆಂಗಳೂರು ಪರ ಮಹೇಂದರ್ ಸಿಂಗ್ ಹಾಗೂ ಸೌರಭ್ ನಂದಾಲ್ ತಲಾ ಆರು ಪಾಯಿಂಟ್ಸ್ ಗಳಿಸಿದರು.

ಪಟ್ನಾ ಮೊದಲಾರ್ಧದಲ್ಲೇ 20–16ರಿಂದ ಮುನ್ನಡೆ ಸಾಧಿಸಿತ್ತು. ಬಳಿಕವೂ ಪಾರಮ್ಯ ಮೆರೆದು ಗೆಲುವು ಒಲಿಸಿಕೊಂಡಿತು.

ಪಂದ್ಯ ಸೋತರೂ ಬುಲ್ಸ್ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಪಟ್ನಾ ಎರಡನೇ ಸ್ಥಾನದಲ್ಲಿದೆ.

ತಲೈವಾಸ್– ಪಿಂಕ್ ಪ್ಯಾಂಥರ್ಸ್ ಸಮಬಲ: ಜಿದ್ದಾಜಿದ್ದಿನ ಪೈಪೋಟಿ ನಡೆದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್– ತಮಿಳ್ ತಲೈವಾಸ್ ತಂಡಗಳು 31–31ರಿಂದ ಟೈ ಸಾಧಿಸಿದವು.

ಆರಂಭದಿಂದಲೇ ಭಾರಿ ಹೋರಾಟ ನಡೆದ ಪಂದ್ಯದ ಮೊದಲಾರ್ಧದ ಮುಕ್ತಾಯದ ವೇಳೆಗೆ ಜೈಪುರ 17–13ರಿಂದ ಮುಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ 18 ಪಾಯಿಂಟ್ಸ್ ಗಳಿಸಿದ ತಲೈವಾಸ್ ತಂಡವು ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಜೈಪುರ ತಂಡದ ಪರ ರೇಡರ್ ಅರ್ಜುನ್ ದೇಸ್ವಾಲ್ ಮತ್ತು ನವೀನ್ ತಲಾ ಆರು ಪಾಯಿಂಟ್ಸ್ ಕಲೆಹಾಕಿ ಮಿಂಚಿದರು. ಡಿಫೆಂಡರ್ ಸಂದೀಪ್ ಧುಳ್ ಕೂಡ ಐದು ಪಾಯಿಂಟ್ಸ್ ಗಳಿಸಿದರು.

ತಮಿಳ್ ತಲೈವಾಸ್ ತಂಡಕ್ಕೆ ಮಂಜೀತ್ (9 ಪಾಯಿಂಟ್ಸ್), ಡಿಫೆಂಡರ್ಗಳಾದ ಸುರ್ಜೀತ್ ಸಿಂಗ್ (5) ಮತ್ತು ಸಾಗರ್ (4) ಕಾಣಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.