ನವದೆಹಲಿ: ದಿಗ್ಗಜ ಅಥ್ಲೀಟ್ ಪಿ.ಟಿ. ಉಷಾ ಅವರು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮೊದಲ ಮಹಿಳಾ ಅಧ್ಯಕ್ಷೆಯಾಗುವುದು ಖಚಿತವಾಗಿದೆ. ಡಿಸೆಂಬರ್ 10ರಂದು ನಿಗದಿಯಾಗಿರುವ ಚುನಾವಣೆಯ ಅಧ್ಯಕ್ಷ ಹುದ್ದೆಗೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ.

58 ವರ್ಷದ ಉಷಾ, ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನ 400 ಮೀ. ಹರ್ಡಲ್ಸ್ನಲ್ಲಿ ನಾಲ್ಕನೇ ಸ್ಥಾನ
ಗಳಿಸಿದ್ದರು. ಎರಡು ದಶಕಗಳ ಕಾಲ ಭಾರತ ಮತ್ತು ಏಷ್ಯಾ ಅಥ್ಲೆಟಿಕ್ಸ್ನಲ್ಲಿ ಮಿಂಚಿದ್ದ ಅವರು 2000ನೇ ಇಸ್ವಿಯಲ್ಲಿ ಹಲವು ಪದಕಗಳೊಂದಿಗೆ ನಿವೃತ್ತರಾಗಿದ್ದರು.

ಐಒಎಯ 95 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಮೊದಲ ಒಲಿಂಪಿಯನ್ ಮತ್ತು ಅಂತರರಾಷ್ಟ್ರೀಯ ಪದಕ ವಿಜೇತೆ ಎಂಬ ಗೌರವ ಉಷಾ ಅವರದಾಗಲಿದೆ.

ಮಹಾರಾಜ ಯಾದವೀಂದ್ರ ಸಿಂಗ್ ಬಳಿಕ ಐಒಎ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಮೊದಲ ಕ್ರೀಡಾಪಟು ಎಂಬ ಶ್ರೇಯವೂ ಉಷಾ ಅವರದು. 1938–1960ರ ಅವಧಿಯಲ್ಲಿಯಾದವೀಂದ್ರ ಸಿಂಗ್ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದರು. ಕ್ರಿಕೆಟಿಗ ಆಗಿದ್ದ ಅವರು 1934ರಲ್ಲಿ ಟೆಸ್ಟ್ ಪಂದ್ಯವೊಂದನ್ನು ಆಡಿದ್ದರು.

‘ಪಯ್ಯೋಳಿ ಎಕ್ಸ್ಪ್ರೆಸ್‘ ಖ್ಯಾತಿಯ ಕೇರಳದ ಉಷಾ ಅವರನ್ನು ಭಾರತೀಯ ಜನತಾ ಪಕ್ಷವು ಜುಲೈನಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು.

ಉಷಾ ಅವರು ಭಾನುವಾರ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ತಮ್ಮ ತಂಡದ 14 ಜನರೊಂದಿಗೆ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಭಾನುವಾರವೇ ಕೊನೆಯ ದಿನವಾಗಿತ್ತು.

ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಅವರು ಶುಕ್ರವಾರ ಮತ್ತು ಶನಿವಾರ ಯಾವುದೇ ನಾಮಪತ್ರಗಳನ್ನು ಸ್ವೀಕರಿಸಿರಲಿಲ್ಲ. ಆದರೆ ಭಾನುವಾರ ವಿವಿಧ ಹುದ್ದೆಗಳಿಗೆ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಒಬ್ಬರು ಉಪಾಧ್ಯಕ್ಷೆ, ಒಬ್ಬ ಜಂಟಿ ಕಾರ್ಯದರ್ಶಿ (ಮಹಿಳೆ) ಹುದ್ದೆಗೆ ಸ್ಪರ್ಧೆ ನಡೆಯಲಿದೆ. ಕಾರ್ಯಕಾರಿ ಕೌನ್ಸಿಲ್ನ ನಾಲ್ಕು ಸದಸ್ಯ ಸ್ಥಾನಗಳಿಗೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಧ್ಯಕ್ಷ, ಹಿರಿಯ ಉಪಾಧ್ಯಕ್ಷ, ಇಬ್ಬರು ಉಪಾಧ್ಯಕ್ಷರು (ತಲಾ ಒಬ್ಬ ಮಹಿಳೆ ಮತ್ತು ಪುರುಷ), ಒಬ್ಬ ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು (ತಲಾ ಒಬ್ಬ ಮಹಿಳೆ ಮತ್ತು ಪುರುಷ), ಆರು ಮಂದಿ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿದೆ

‘ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗೋಲ್ಡನ್ ಗರ್ಲ್ ಪಿ.ಟಿ. ಉಷಾ ಅವರಿಗೆ ಅಭಿನಂದನೆಗಳು. ಪ್ರತಿಷ್ಠಿತ ಐಒಎ ಸಂಸ್ಥೆಯ ಪದಾಧಿಕಾರಿಗಳಾಗಲಿರುವ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದಿಸುವೆ. ಅವರ ಕುರಿತು ದೇಶ ಹೆಮ್ಮೆ ಪಡುತ್ತದೆ‘ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

ಪಿ.ಟಿ. ಉಷಾ ಪ್ರಮುಖ ಸಾಧನೆ

*ಏಷ್ಯನ್ ಗೇಮ್ಸ್ನಲ್ಲಿ ನಾಲ್ಕು ಚಿನ್ನ ಸೇರಿ 11 ಪದಕ ( ಅವಧಿ: 1982–1994)

*ಏಷ್ಯನ್ ಚಾಂಪಿಯನ್ಷಿಪ್ನಲ್ಲಿ 14 ಚಿನ್ನ ಸೇರಿ 23 ಪದಕ (ಅವಧಿ: 1983–98)

*1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನ 400 ಮೀಟರ್ಸ್ ಹರ್ಡಲ್ಸ್ನಲ್ಲಿ ನಾಲ್ಕನೇ ಸ್ಥಾನ

* ಸ್ಪರ್ಧಿಸಿದ್ದ ಪ್ರಮುಖ ವಿಭಾಗಗಳು

100 ಮೀ, 200 ಮೀ, 400 ಮೀ, 400 ಮೀ. ಹರ್ಡಲ್ಸ್, 4X100 ಮೀ. ರಿಲೇ ಮತ್ತು 4X400 ಮೀ. ರಿಲೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.