ನವದೆಹಲಿ: ಸ್ಲೋವಾಕಿಯಾದಲ್ಲಿ ನಡೆಯುತ್ತಿರುವ ಡುಡಿನ್ಸ್ಕಾ 50 ಮೀಟ್‌ನಲ್ಲಿ ಭಾರತದ ರಾಮ್ ಬಾಬೂ ಅವರು ಶನಿವಾರ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ 20 ಕಿ.ಮೀ. ನಡಿಗೆ ಸ್ಪರ್ಧೆಯ ಅರ್ಹತಾ ಮಾನದಂಡವನ್ನು 1:20:00 ಸೆಕೆಂಡುಗಳಲ್ಲಿ ಕ್ರಮಿಸಿದರು. ಈ ಸಾಧನೆ ಮಾಡಿದ ಭಾರತದ 7ನೇ ಪುರುಷ ಅಥ್ಲೀಟ್ ಆಗಿದ್ದಾರೆ.

ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 35 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಬಾಬೂ, ಈ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.

ಇದೇ ಮೊದಲ ಬಾರಿಗೆ ಭಾರತೀಯ ಅಥ್ಲೀಟ್ ಒಬ್ಬರು ಈ ಕೂಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಒಲಿಂಪಿಕ್ ಅರ್ಹತೆಗಾಗಿ ಕಟ್ ಆಫ್ ಅಂಕ 1:20:10 ಆಗಿದೆ. ಪೆರುವಿನ ಸೀಸರ್ ರೊಡ್ರಿಗಸ್ (1:19:41) ಮೊದಲ ಸ್ಥಾನ ಪಡೆದರೆ, ಈಕ್ವೆಡಾರ್ ನ ಬ್ರಿಯಾನ್ ಪಿಂಟಾಡೊ (1:19:44) ಎರಡನೇ ಸ್ಥಾನ ಪಡೆದರು.

ಒಲಿಂಪಿಕ್ಸ್‌ನಲ್ಲಿ ದೇಶವು ವೈಯಕ್ತಿಕ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಕೇವಲ ಮೂವರು ಕ್ರೀಡಾಪಟುಗಳನ್ನು ಮಾತ್ರ ಕಳುಹಿಸಬಹುದು. ಪ್ಯಾರಿಸ್ ಕ್ರೀಡಾಕೂಟಕ್ಕೆ ಏಳು ರೇಸ್ ವಾಕರ್‌ಗಳಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುವುದು ಈಗ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಗೆ ಬಿಟ್ಟಿದ್ದು.

ಅಂತಿಮ ಆಯ್ಕೆ ಜೂನ್ ನಲ್ಲಿ ನಡೆಯಲಿದೆ ಎಂದು ಮುಖ್ಯ ಅಥ್ಲೆಟಿಕ್ಸ್ ಕೋಚ್ ರಾಧಾಕೃಷ್ಣನ್ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.