ಬೆಂಗಳೂರು: ಭಾರತದ ಖಾಸಗಿ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಅಲಯನ್ಸ್ ‘ಕೇರ್ ಫಾರ್ ಹಾಕಿ’ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದೆ. ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಈ ಅಭಿಯಾನದ ರಾಯಭಾರಿಯಾಗಿದ್ದಾರೆ.

ದೇಶದಲ್ಲಿ ಹಾಕಿ ಕ್ರೀಡೆಗೆ ಇನ್ನಷ್ಟು ಗೌರವ ತಂದುಕೊಡುವುದು ಮತ್ತು ನೆರವಿನ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು ಈ ಅಭಿಯಾನದ ಉದ್ದೇಶ ಎಂದು ಪ್ರಕಟಣೆ ತಿಳಿಸಿದೆ.

ಹಾಕಿಯನ್ನು ತಳಮಟ್ಟದಿಂದ ಬೆಳೆಸಲು ಈ ಅಭಿಯಾನ ಗಮನ ನೀಡಲಿದೆ. ರಾಣಿ ರಾಂಪಾಲ್ ಅವರ ದೃಢಸಂಕಲ್ಪ, ಏಕಾಗ್ರತೆ ಮತ್ತು ಸೋಲೊಪ್ಪಿಕೊಳ್ಳದ ಮನೋಭಾವ ಅಭಿಯಾನದ ಯಶಸ್ಸಿಗೆ ನೆರವಾಗುವ ಭರವಸೆ ಇದೆ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯಪಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.