ಇಂಡಿಯಾನಾಪೊಲಿಸ್: ಅಲ್ಪಾವಧಿಯ ಕ್ರೀಡಾಜೀವನದಲ್ಲಿ ಏಳುಬೀಳುಗಳನ್ನು ಕಂಡಿರುವ ರೀಗನ್ ಸ್ಮಿತ್ ಅವರು ಅಮೆರಿಕದ ಈಜು ಟ್ರಯಲ್ಸ್ನಲ್ಲಿ ಮಂಗಳವಾರ ರಾತ್ರಿ ಮಹಿಳೆಯರ 100 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು.

ಮಿನೆಸೋಟಾದವರಾದ 22 ವರ್ಷದ 57.13 ಸೆಕೆಂಡುಗಳಲ್ಲಿ ಅಂತರ ಕ್ರಮಿಸಿ, ಆಸ್ಟ್ರೇಲಿಯಾದ ಕೇಯ್ಲಿ ಮೆಕ್ಕಿಯೊನ್ ಹೆಸರಿನಲ್ಲಿದ್ದ 57.33 ಸೆ.ಗಳ ಹಳೆದ ದಾಖಲೆ ಮುಳುಗಿಸಿದರು.

2019ರಲ್ಲಿ ಈ ಸ್ಪರ್ಧೆಯಲ್ಲಿ ಮೊದಲ ಬಾರಿ ವಿಶ್ವದಾಖಲೆ ಸ್ಥಾಪಿಸಿದ್ದಾಗ ಸ್ಮಿತ್ ವಯಸ್ಸು ಕೇವಲ 17. ಆದರೆ ಬಲುಬೇಗ ಪ್ರಸಿದ್ಧಿಗೆ ಬಂದ ಅವರು ನಂತರ ತಮ್ಮ ಪ್ರಾಬಲ್ಯವನ್ನು ಮೆಕ್ಕಿಯೊನ್ ಎದುರು ಕಳೆದುಕೊಂಡಿದ್ದರು.

ಸ್ಮಿತ್ ಪ್ರತಿಭೆ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಆದರೆ ಆತ್ಮವಿಶ್ವಾಸದ ಕೊರತೆಯಿಂದ ಅವರು ಹಿಂದೆಬೀಳುತ್ತಿದ್ದರು. ಮನೋಬಲ ವೃದ್ಧಿಸಲು ಕಳೆದ ಅಕ್ಟೋಬರ್ನಿಂದ ಅವರು ಕ್ರೀಡಾ ಮನಃಶಾಸ್ತ್ರಜ್ಞರ ನೆರವು ಪಡೆಯುತ್ತಿದ್ದಾರೆ. ಹೀಗಾಗಿ

ಅವರ ಕೋಚ್ ಬಾಬ್ ಬೌಮನ್ ಅವರನ್ನು ಕಠಿಣ ತರಬೇತಿಗೊಳಪಡಿಸಿದ್ದರು. ಬೌಮನ್ ಅವರು ಈ ಹಿಂದೆ 23 ಚಿನ್ನದ ಪದಕ ಗಳಿಸಿರುವ ಮೈಕೆಲ್ ಪೆಲ್ಪ್ಸ್ ಅವರಿಗೆ ತರಬೇತಿ ನೀಡಿದ್ದಾರೆ.

‘ಇದು ಶ್ರಮಕ್ಕೆ ಸಂದ ಫಲ’ ಎಂದು ಸ್ಮಿತ್ ಹೇಳಿದರು. ಹದಿವಯಸ್ಸಿನಲ್ಲಿದ್ದಾಗ ನಾನು ಹೆಚ್ಚಿನದನ್ನು ಸಾಧಿಸಲಿಲ್ಲ.

ಟೋಕಿಯೊ (2021) ಒಲಿಂಪಿಕ್ಸ್ನಲ್ಲಿ ಅವರು ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಮೆಕ್ಕಿಯೊನ್ ಚಿನ್ನದ ಪದಕ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.