ವಿಶ್ವದ ಶ್ರೇಷ್ಠ ಸ್ನೂಕರ್ ಪ್ರತಿಭೆ ರೋನಿ ಒ‘ ಸುಲಿವಾನ್. ಬಾಲ್ಯದ ಕಹಿ ಅನುಭವಗಳನ್ನು ಮೀರಿ ನಿಂತ ಈ ತಾರಾ ಆಟಗಾರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆರನೇ ಬಾರಿ ವಿಶ್ವ ಸ್ನೂಕರ್ ಕಿರೀಟ ಅವರ ಮುಡಿಗೇರಿದೆ.

ರೊನಾಲ್ಡ್ ಅಂಟೋನಿಯೊ ಸುಲಿವಾನ್ ಜನಿಸಿದ್ದು 1975ರಲ್ಲಿ. ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್‌ನ ವರ್ಡ್‌ಸ್ಲಿ ಅವರ ಹುಟ್ಟೂರು. ವ್ಯಕ್ತಿಯೊಬ್ಬನನ್ನು ಕೊಲೆಗೈದ ಆಪಾದನೆಯ ಮೇಲೆ ಸುಲಿವಾನ್ ತಂದೆ ರೊನಾಲ್ಡ್ ಜಾನ್ 18 ವರ್ಷ ಜೈಲುವಾಸ ಅನುಭವಿಸುತ್ತಾರೆ. ಇತ್ತ ತಾಯಿ ಮರಿಯಾಗೆ ಕೂಡ ತೆರಿಗೆ ವಂಚನೆ ಆರೋಪದಲ್ಲಿ ಒಂದು ವರ್ಷ ಜೈಲು ಶಿಕ್ಷೆ. ಆ ಸಂದರ್ಭದಲ್ಲಿ ಸುಲಿವಾನ್‌ಗೆ ಸಿಕ್ಕಿದ್ದು ಆತನ ಎಂಟು ವರ್ಷದ ಸಹೋದರಿ ಡೇನಿಯಲ್ಲೆಯ ಆಶ್ರಯ. ಇಂತಹ ಕಹಿ ಅನುಭವಗಳಿಗೆ ಸುಲಿವಾನ್ ಬೆನ್ನು ತೋರಿದವರು.

44ರ ಹರಯದ ಸುಲಿವಾನ್ ಏಳನೇ ವಯಸ್ಸಿಗೆ ಸ್ನೂಕರ್ ಹುಚ್ಚು ಹಿಡಿಸಿಕೊಂಡರು.1992ರಲ್ಲಿ ವೃತ್ತಿಪರ ಸ್ನೂಕರ್‌ಗೆ ಪದಾರ್ಪಣೆ ಮಾಡಿ, ಶೀಘ್ರಗತಿಯಲ್ಲಿ ಪ್ರಗತಿಯ ಮೆಟ್ಟಿಲು ಏರಿದವರು. ಆರು ಬಾರಿ ವಿಶ್ವ ಚಾಂಪಿಯನ್‌ಷಿಪ್, ದಾಖಲೆಯ ಏಳು ಮಾಸ್ಟರ್ಸ್ ಪ್ರಶಸ್ತಿಗಳು, ಟ್ರಿಪಲ್ ಕ್ರೌನ್ ಟೂರ್ನಿಯಲ್ಲಿ 20 ಬಾರಿ ಕಿರೀಟವನ್ನು ಅವರು ಧರಿಸಿದ್ದಾರೆ.

ರ‍್ಯಾಂಕಿಂಗ್ ಟೂರ್ನಿಗಳ ವಿಜಯದಲ್ಲೂ ಅವರದೇ ಪಾರುಪತ್ಯ. 37 ಟೂರ್ನಿಗಳಲ್ಲಿ ಚಾಂಪಿಯನ್ ಆಗಿರುವ ಅವರು, ಸ್ಕಾಟ್ಲೆಂಡ್‌ನ ಖ್ಯಾತ ಆಟಗಾರ ಸ್ಟೀಫನ್ ಹೆಂಡ್ರಿಯ (36) ದಾಖಲೆಯನ್ನು ಅಳಿಸಿಹಾಕಿದ್ದಾರೆ. ರ‍್ಯಾಂಕಿಂಗ್ ಟೂರ್ನಿಯೊಂದರಲ್ಲಿ ವಿಜಯಿಯಾದ ಅತಿ ಕಿರಿಯ (17 ವರ್ಷ, 358 ದಿನಗಳು) ಎಂಬ ಹಿರಿಮೆಯೂ ಸುಲಿವಾನ್ ಅವರದ್ದು.

ವೃತ್ತಿಜೀವನದಲ್ಲಿ ಗೆದ್ದ ಪಂದ್ಯ, ಪ್ರಶಸ್ತಿಗಳಿಂದ ಗಳಿಸಿದ ಆದಾಯ ಶತಕೋಟಿ ರೂಪಾಯಿಗಿಂತಲೂ (11 ಮಿಲಿಯನ್ ಪೌಂಡ್ ಸ್ಟರ್ಲಿಂಗ್) ಅಧಿಕ.

ಬಹುಮುಖ ಪ್ರತಿಭೆ: ಸ್ನೂಕರ್ ಇತಿಹಾಸದಲ್ಲಿ ಸುಲಿವಾನ್ ಸ್ವಾಭಾವಿಕವಾಗಿಅತ್ಯಂತ ಪ್ರತಿಭಾನ್ವಿತ ಆಟಗಾರ ಎಂಬುದು ಹಲವರ ಅಭಿಪ್ರಾಯ. ಅವರದು ಬಹುಮುಖಿ ವ್ಯಕ್ತಿತ್ವ. ಸುಲಿವಾನ್ ಅವರು ಖ್ಯಾತ ಲೇಖಕ ಎಮ್ಲಿನ್ ರೀಸ್ ಅವರ ಸಹಯೋಗದೊಂದಿಗೆ ಅಪರಾಧ ವಿಷಯವಸ್ತುವುಳ್ಳಮೂರು ಕಾದಂಬರಿಗಳನ್ನು ರಚಿಸಿದ್ದಾರೆ. ಸುಲಿವಾನ್ ಅವರ ಬಾಲ್ಯಜೀವನದ ಅನುಭವ ಕಥನಗಳು ಇದರಲ್ಲಿ ಅಡಗಿವೆ. ಎರಡು ಜೀವನಚರಿತ್ರೆಗಳೂ ಅವರ ಲೇಖನಿಯಿಂದ ಹೊರಹೊಮ್ಮಿವೆ. ‘ದ ಆಟೊಬಯಾಗ್ರಫಿ ಆಫ್ ರೋನಿ ಒ ಸುಲಿವಾನ್‘ ಹಾಗೂ ರನ್ನಿಂಗ್‘ ಅವುಗಳ ಹೆಸರು.

ಫೋನಿಕ್ಸ್ ಎಫ್‌ಎಮ್ ಎಂಬ ರೇಡಿಯೊ ವಾಹಿನಿಯನ್ನೂ ಅವರು ಆರಂಭಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.