ನವದೆಹಲಿ: ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಜೂನಿಯರ್ ಮಹಿಳಾ ವಿಭಾಗದ ಫೈನಲ್ ರೇಸ್‌ನಲ್ಲಿ ಸರಿತಾ ಕುಮಾರಿ 36.966 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

ಪ್ಯಾರಾ ವಿಭಾಗದಲ್ಲಿ ಭಾರತವು ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದಿದೆ.

ಅರ್ಹತಾ ಸುತ್ತಿನಲ್ಲಿ ಸಾಕಷ್ಟು ದೃಢಸಂಕಲ್ಪ ಪ್ರದರ್ಶಿಸಿದ ಸರಿತಾ 36.912 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್‌ನಲ್ಲಿ ಸ್ಥಾನ ಪಡೆದು ಪದಕ ಗೆದ್ದುಕೊಂಡರು.

ಸೀನಿಯರ್ ವೈಯಕ್ತಿಕ ಪರ್ಸ್ಯೂಟ್ ವಿಭಾಗದಲ್ಲಿ ಮೀನಾಕ್ಷಿ 3: 42.515 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಆದರೆ, ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದರು.

ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಅರ್ಷದ್ ಶೇಖ್ 1 ಕಿ.ಮೀ ಟೈಮ್ ಟ್ರಯಲ್ ಸಿ 2 ವಿಭಾಗದಲ್ಲಿ 1: 25.753 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಎರಡನೇ ಚಿನ್ನದ ಪದಕ ಗೆದ್ದರು.

ಆರ್ಯವರ್ಧನ್ ಚೀಲಂಪಲ್ಲಿ 1:41.071 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು.

ಪ್ಯಾರಾ ಮಹಿಳಾ ಸೈಕ್ಲಿಸ್ಟ್ ಜ್ಯೋತಿ ಗಡೇರಿಯಾ 500 ಮೀಟರ್ ಟೈಮ್ ಟ್ರಯಲ್ (ಸಿ 2 ವಿಭಾಗ) ನಲ್ಲಿ 52.450 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.