ಮಂಗಳೂರು: ಕರ್ನಾಟಕ ಹಾಷಿಕಾ ರಾಮಚಂದ್ರ ಅವರು 77ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 4 ನಿಮಿಷ 24 .70 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ 13 ವರ್ಷ ಹಳೆಯ ದಾಖಲೆಯನ್ನು ಮುರಿದರು.

ಇಲ್ಲಿನ ಎಮ್ಮೆಕೆರೆಯ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರ ಆರಂಭವಾದ ಚಾಂಪಿಯನ್‌ಷಿಪ್‌ನ ಮೊದಲ ದಿನದ ಸ್ಪರ್ಧೆಗಳಲ್ಲಿ ರಾಜ್ಯದ ಈಜುಪಟುಗಳು ಪಾರಮ್ಯ ಮೆರೆದರು. ಒಟ್ಟು 6 ಚಿನ್ನ ಹಾಗೂ ಮೂರು ಬೆಳ್ಳಿಯ ಪದಕಗಳನ್ನು ಗೆಲ್ಲುವ ಮೂಲಕ ಕರ್ನಾಟಕವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪುರುಷರ 400 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ರಾಜ್ಯದ ಅನೀಶ್ ಎಸ್.ಗೌಡ, 100 ಮೀ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ರಾಜ್ಯದ ಆಕಾಶ್ ಮಣಿ, ಮಹಿಳೆಯರ 200 ಮೀ ಬ್ರೆಸ್ಟ್ ಸ್ಟೋಕ್ ಸ್ಪರ್ಧೆಯಲ್ಲಿ ರಾಜ್ಯದ ತಾನ್ಯಾ ಷಡಕ್ಷರಿ ಚಿನ್ನದ ಪದಕ ಗೆದ್ದರು. ಪುರುಷರ 4X200 ಮೀ ಫ್ರೀಸ್ಟೈಲ್ ರಿಲೇ ಹಾಗೂ ಮಹಿಳೆಯರ 4X200 ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲೂ ಕರ್ನಾಟಕದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪುರುಷರ ರಿಲೇ ತಂಡವನ್ನು ಅನೀಶ್ ಎಸ್. ಗೌಡ, ದರ್ಶನ್ ಎಸ್., ಕಾರ್ತಿಕೇಯನ್ ನಾಯರ್, ದಕ್ಷಣ್ ಎಸ್. ಹಾಗೂ ಮಹಿಳೆಯರ ರಿಲೇ ತಂಡವನ್ನು ಶಿರಿನ್, ಶಾಲಿನಿ ಆರ್.ದೀಕ್ಷಿತ್, ನೈಷಾ, ಹಾಷಿಕಾ ರಾಮಚಂದ್ರ ಪ್ರತಿನಿಧಿಸಿದ್ದರು.

ಮೊದಲ ದಿನವೇ ಕೂಟ ದಾಖಲೆ: 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ರಾಜ್ಯದ ಹಾಷಿಕಾ ರಾಮಚಂದ್ರ ಅವರು 2011ರಲ್ಲಿ ರಾಂಚಿಯಲ್ಲಿ ರಿಚಾ ಮಿಶ್ರಾ ಸ್ಥಾಪಿಸಿದ್ದ ಕೂಟ ದಾಖಲೆಯನ್ನು (4 ನಿ. 25.76 ಸೆ) ಅಳಿಸಿ ಹಾಕಿದರು. ಹಾಷಿಕಾ ಅವರಿಗೆ ತೆಲಂಗಾಣದ ವೃತ್ತಿ ಅಗರ್ವಾಲ್ ಅವರು ನಿಕಟ ಪೈಪೋಟಿ (4 ನಿ. 25.09 ಸೆ) ಒಡ್ಡಿದರು. ಎದುರಾಳಿಗಿಂತ 39 ಸೆಕೆಂಡ್ ಮೊದಲೇ ಹಾಶಿಕಾ ಗುರಿ ತಲುಪಿ ದಾಖಲೆ ನಿರ್ಮಿಸಿ ಸಂಭ್ರಮಿಸಿದರು.

ಇತರ ಫಲಿತಾಂಶಗಳು ಇಂತಿವೆ

ಪುರುಷರ ವಿಭಾಗ

50 ಮೀ. ಬಟರ್‌ಫ್ಲೈ: ಬಿ.ಬೆನೆಡಿಕ್ಟನ್ ರೋಹಿತ್ (ತಮಿಳುನಾಡು)–1; ಮಿಹಿರ್ ಆಮ್ರೆ (ಮಹಾರಾಷ್ಟ್ರ)–2; ಆದಿತ್ಯಾ ದಿನೇಶ್ (ತ.ನಾ)–3, ಕಾಲ: 24.22 ಸೆ.

100 ಮೀ ಬ್ಯಾಕ್‌ಸ್ಟ್ರೋಕ್: ಆಕಾಶ್ ಮಣಿ (ಕರ್ನಾಟಕ)–1; ರಿಷಬ್ ಅನುಪಮ್ ದಾಸ್ (ಮಹಾರಾಷ್ಟ್ರ)–2; ವಿನಾಯಕ ವಿಜಯ್ (ಎಸ್‌ಎಸ್‌ಸಿಬಿ)-3, ಕಾಲ: 56.15ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್: ಧನುಷ್ ಸುರೇಶ್ (ತಮಿಳುನಾಡು)–1; ಮಣಿಕಂಠ ಎಲ್ (ಕರ್ನಾಟಕ)–2; ಅನೂಪ್ ಆಗಸ್ಟಿನ್ (ರೈಲ್ವೇಸ್)–3, ಕಾಲ: 2ನಿ.18.85 ಸೆ.

400 ಮೀ ಫ್ರೀಸ್ಟೈಲ್: ಅನೀಶ್ ಎಸ್ ಗೌಡ (ಕರ್ನಾಟಕ)–1; ದರ್ಶನ್ ಎಸ್. (ಕರ್ನಾಟಕ)–2; ದೇವಾಂಶ್ ಮಹೇಶ್‌ಕುಮಾರ್ ಪಿ. (ರೈಲ್ವೆಸ್)–3, ಕಾಲ: 3ನಿ. 56.59 ಸೆ.

4X200 ಮೀ ಫ್ರೀಸ್ಟೈಲ್ ರಿಲೇ: ಕರ್ನಾಟಕ (ಅನೀಶ್ ಗೌಡ, ದರ್ಶನ್ ಎಸ್., ಕಾರ್ತಿಕೇಯನ್ ನಾಯರ್, ದಕ್ಷಣ್ ಎಸ್.)–1, ಕಾಲ: 7ನಿ.42.90ಸೆ.; ಆರ್‌ಎಸ್‌ಪಿಬಿ–2, ಕಾಲ: 7ನಿ.47.64 ಸೆ.–2; ಎಸ್‌ಎಸ್‌ಸಿಬಿ– 3, ಕಾಲ: 7 ನಿ.50.45ಸೆ.

ಮಹಿಳೆಯರ ವಿಭಾಗ

50 ಮೀ. ಬಟರ್‌ಫ್ಲೈ: ಮಹಿ ಶ್ವೇತರಾಜ್ (ಬಿಹಾರ)–1; ಮಾನ್ವಿ ವರ್ಮಾ (ಕರ್ನಾಟಕ)–2; ರುಜುತಾ ಪ್ರಸಾದ್ ರಾಜಾಡ್ನ್ಯಾ (ಮಹಾರಾಷ್ಟ್ರ)–3, ಕಾಲ: 28.33 ಸೆ.;

100 ಮೀ ಬ್ಯಾಕ್‌ಸ್ಟ್ರೋಕ್: ಸೌಬ್ರಿತಿ ಮೊಂಡಲ್ (ಪ.ಬಂಗಾಳ)–1, ಪ್ರತ್ಯಸಾ ರೇ (ಒಡಿಶಾ)–2; ರುಜುತಾ ಪ್ರಸಾದ್ ರಾಜಾಡ್ನ್ಯಾ (ಮಹಾರಾಷ್ಟ್ರ)–3, ಕಾಲ: 1 ನಿ.05.51 ಸೆ.;

200 ಮೀ ಬ್ರೆಸ್ಟ್‌ಸ್ಟ್ರೋಕ್: ತಾನ್ಯಾ ಷಡಕ್ಷರಿ (ಕರ್ನಾಟಕ)–1; ಜ್ಯೋತಿ ಬಾಜಿರಾವ್ ಪಾಟೀಲ (ಮಹಾರಾಷ್ಟ್ರ)–2, ಹರ್ಷಿತಾ ಜಯರಾಮ್ (ಆರ್‌ಎಸ್‌ಪಿಬಿ)–3, ಕಾಲ: 2 ನಿ.40.54;

400 ಮೀ ಫ್ರೀಸ್ಟೈಲ್: ಹಾಷಿಕಾ ರಾಮಚಂದ್ರ (ಕರ್ನಾಟಕ)–1, ವೃತ್ತಿ ಅಗರ್ವಾಲ್ (ತೆಲಂಗಾಣ)–2, ಭವ್ಯಾ ಸಚ್‌ದೇವ್ (ದೆಹಲಿ)–3, ಕಾಲ: 4 ನಿ.24.70 ಸೆ., ಕೂಟ ದಾಖಲೆ;

4X200 ಮೀ ಫ್ರೀಸ್ಟೈಲ್ ರಿಲೇ: ಕರ್ನಾಟಕ –1; ಮಹಾರಾಷ್ಟ್ರ–2; ಒಡಿಶಾ– 3, ಕಾಲ: (8 ನಿ. 54.85 ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.