ನವದೆಹಲಿ: ಶಿವ ಥಾಪ ಹಾಗೂ ಮಂದೀಪ್ ಜಾಂಗ್ರಾ ಸೇರಿದಂತೆಭಾರತದ ನಾಲ್ವರು ಬಾಕ್ಸರ್‌ಗಳು ಮಂಗೋಲಿಯಾದಲ್ಲಿ ನಡೆಯುತ್ತಿರುವ ಉಲಾನ್ ಬಾತರ್ ಬಾಕ್ಸಿಂಗ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್ ತಲುಪಿದ್ದಾರೆ.

ಪುರುಷರ 60 ಕೆ. ಜಿ. ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶಿವ ಅವರು ಕಿರ್ಗಿಸ್ತಾನದ ರೌಶನ್‌ಬೆಕ್ ಅವರನ್ನು ಸೋಲಿಸಿದರು. ಸೆಮಿ ಫೈನಲ್ ಪಂದ್ಯದಲ್ಲಿ ಅವರು ಸ್ಥಳೀಯ ಬತ್ತೂಮೂರ್ ಮಿಶೀಲ್ಟ್ ಅವರನ್ನು ಎದುರಿಸಲಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಮಂದೀಪ್ ಅವರು ಮಂಗೋಲಿಯಾದ ಬಾತ್ಕು ಯಾಗ್ ಸುಖ್ಖುಯಾಗ್ ಅವರನ್ನು ಮಣಿಸಿದರು.

75 ಕೆ. ಜಿ. ವಿಭಾಗದಲ್ಲಿ ವ್ಯಾನ್ ಲಿಂಪುಯಿಯಾ ಹಾಗೂ 56 ಕೆ. ಜಿ. ವಿಭಾಗದಲ್ಲಿ ಎತಾಶ್ ಖಾನ್ ಅವರು ಜಯಿಸಿದರು. ವ್ಯಾನ್‌ಲಿಂಪುಯಿಯಾ ಅವರು ಕೊರಿಯಾದ ಸಾಂಗ್ ಮ್ಯೊಂಗ್ ಸು ಅವರ ವಿರುದ್ಧ ಗೆದ್ದರು. ಎತಾಶ್ ಅವರು ಚೀನಾದ ಜಿಯಾ ವಿ ಲು ವಿರುದ್ಧ ಜಯಿಸಿದರು.

ಮಹಿಳೆಯರ 60 ಕೆ. ಜಿ. ವಿಭಾಗದಲ್ಲಿ ಎಲ್. ಸರಿತಾ ದೇವಿ ಅವರು ಚೀನಾ ತೈಪೆಯ ಶಿ ಯು ವು ಅವರ ವಿರುದ್ಧ ಪರಾಭವಗೊಂಡರು.

ಭಾರತದ ಸೋನಿಯಾ ಥಾಪರ್, ಲವ್ಲಿನಾ ಬೊರ್ಗೊಹೇನ್, ಹಿಮಾಂಶು ಶರ್ಮಾ ಹಾಗೂ ಆಶಿಶ್ ಅವರು ಗುರುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೆದ್ದು ಈಗಾಗಲೇ ಸೆಮಿಫೈನಲ್‌ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.