ಮುಂಬೈ: ವಿಚ್ಛೇದನ ವದಂತಿ ನಡುವೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಪತಿ, ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್ ಅವರಿಂದ ಹುಟ್ಟುಹಬ್ಬದ ಶುಭಾಶಯ ಬಂದಿದೆ.

‘ಹ್ಯಾಪಿ ಬರ್ತ್ಡೇ ಸಾನಿಯಾ.. ಅತ್ಯಂತ ಆರೋಗ್ಯಕರ ಮತ್ತು ಸಂತೋಷದ ಜೀವನ ನಿನ್ನದಾಗಲಿ. ಹುಟ್ಟುಹಬ್ಬದ ದಿನವನ್ನು ಎಂಜಾಯ್ ಮಾಡು’ ಎಂದು ಶೋಯಬ್ ಇನ್ಸ್ಟಾಗ್ರಾಮ್ನಲ್ಲಿಬರೆದುಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಇವತ್ತು 36ನೇ ವಸಂತಕ್ಕೆ ಕಾಲಿರಿಸಿದ್ದಾರೆ.

2010ರಲ್ಲಿ ಮದುವೆಯಾಗಿದ್ದ ಸಾನಿಯಾ ಮತ್ತು ಶೋಯಬ್ ಮಲಿಕ್ ದುಬೈಗೆ ಶಿಫ್ಟ್ ಆಗಿದ್ದರು. ದಂಪತಿಗೆ ಒಬ್ಬ ಮಗನಿದ್ದು, ಇತ್ತೀಚೆಗೆ ವಿಚ್ಛೇದನದ ಬಗ್ಗೆ ವದಂತಿ ಹಬ್ಬಿತ್ತು.

‘ಒಡೆದ ಹೃದಯಗಳು ಅಲ್ಲಾಹ್ನನ್ನು ಹುಡುಕಲು ಎಲ್ಲಿಗೆ ಹೋಗುತ್ತವೆ’ ಎಂದು ಇನ್ಸ್ಟಾಗ್ರಾಂನಲ್ಲಿ ಸಾನಿಯಾ ಮಿರ್ಜಾ ಹಾಕಿದ್ದ ಪೋಸ್ಟ್ ವಿಚ್ಚೇದನದ ವದಂತಿಗೆ ಇಂಬು ನೀಡಿತ್ತು.

ಅಲ್ಲದೆ, ಇತ್ತೀಚೆಗೆ ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್ ಜೊತೆಗಿನ ಚಿತ್ರವನ್ನು ಹಂಚಿಕೊಂಡು, ‘ಕಠಿಣ ದಿನಗಳಲ್ಲಿ ನನಗೆ ಸಿಕ್ಕ ಒಳ್ಳೆಯ ಕ್ಷಣಗಳು’ ಎಂದು ಶೀರ್ಷಿಕೆ ನೀಡಿದ್ದರು.

ಆದರೆ, ಶೋಯಬ್ ಅವರ ಹೊಸ ಪೋಸ್ಟ್, ವಿಚ್ಛೇದನ ವದಂತಿ ಬಗ್ಗೆ ಅನುಮಾನ ಹುಟ್ಟಿಸಿದೆ.

ಕಳೆದ ವಾರವಷ್ಟೆ, ಶೋಯಬ್ ಮತ್ತು ಸಾನಿಯಾ, ತಾವಿಬ್ಬರು ಒಟ್ಟಿಗೆ ‘ದಿ ಮಿರ್ಜಾ ಮಲಿಕ್ ಶೋ’ ಎಂಬ ಟಾಕ್ ಶೋ ನಡೆಸಿಕೊಡುವುದಾಗಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.