ಚಾಂಗ್‌ಝೌ (ಚೀನಾ): ಭಾರತದ ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ಅವರಿಗೆ ಸಾಟಿಯಾಗಲಿಲ್ಲ. ನಾಲ್ಕನ ಶ್ರೇಯಾಂಕದ ಜಪಾನ್‌ನ ಆಟಗಾರ್ತಿ ಶುಕ್ರವಾರ ನೇರ ಗೇಮ್‌ಗಳಿಂದ ಮಾಳವಿಕಾ ಅವರನ್ನು ಸೋಲಿಸಿ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ತಲುಪಿದರು.

43ನೇ ಕ್ರಮಾಂಕದ ಮಾಳವಿಕಾ 10–21, 21–16 ರಿಂದ ವಿಶ್ವ ಐದನೇ ಕ್ರಮಾಂಕದ ಆಟಗಾರ್ತಿಯೆದುರು ಸೋಲನುಭವಿಸಿದರು. ಈ ಪಂದ್ಯ 35 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.

22 ವರ್ಷ ವಯಸ್ಸಿನ ಮಾಳವಿಕಾ ಅವರಿಗೆ ಇದು ಯಮಗುಚಿ ಎದುರು ಮೂರನೇ ಸೋಲೆನಿಸಿತು.

ನಾಗ್ಪುರದ ಆಟಗಾರ್ತಿ, ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 25ನೇ ಕ್ರಮಾಂಕದ ಕ್ರಿಸ್ಟಿ ಗಿಲ್ಮೋರ್ ಅವರನ್ನು ಮಣಿಸಿದ್ದರು. ಗಿಲ್ಮೋರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.