ಬಾಸೆಲ್: ಭಾರತದ ಬಿ ಸಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಮಂಗಳವಾರ ಆರಂಭವಾದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿಯು 18–21, 21–16, 21–17ರಿಂದ ಡೆನ್ಮಾರ್ಕಿನ ಮ್ಯಾಡ್ಸ್ ವೆಸ್ಟರ್ಗಾರ್ಡ್ ಮತ್ತು ನತಾಜಾ ಪಿ ಅಂತೋನಿಸೆನ್ ವಿರುದ್ಧ ಜಯಿಸಿತು.

ಆದರೆ, ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಸಾಯಿ ಉತ್ತೇಜಿತ ರಾವ್ ಚುಕ್ಕಾ ಅವರು ಜರ್ಮನಿಯ ಸೆಲಿನಾ ಹಬಶ್ಗೆ ವಾಕ್ ಓವರ್ ಕೊಟ್ಟರು.

ಭಾರತದ ಅಗ್ರಶ್ರೇಯಾಂಕದ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಕೆ ಶ್ರೀಕಾಂತ್ ಅವರು ಈ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ಈಚೆಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ರನ್ನರ್ ಅಪ್ ಆಗಿದ್ದ ಲಕ್ಷ್ಯ ಸೇನ್ ಸ್ವೀಸ್ ಓಪನ್ನಲ್ಲಿ ಆಡುತ್ತಿಲ್ಲ. ಅವರು ವಿಶ್ರಾಂತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.