ಬಾಸೆಲ್: ಬ್ಯಾಡ್ಮಿಂಟನ್ ವಿಶ್ವ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿರುವ ಭಾರತದ ಪಿ.ವಿ.ಸಿಂಧು 'ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ'ಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಭಾನುವಾರ ಬಾಸೆಲ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್ಬಮ್ರುಂಗ್ಪನ್ ಅವರನ್ನು ಸಿಂಧು 21–16,21–8ರಿಂದ ಸೋಲಿಸಿದರು. 49 ನಿಮಿಷ ನಡೆದ ಹೋರಾಟದಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನದಲ್ಲಿರುವ ಬುಸಾನನ್ ಎದುರು ಪೂರ್ಣ ಪ್ರಾಬಲ್ಯ ಸಾಧಿಸಿದರು.

ಆರಂಭದಲ್ಲಿ 7–5ರಿಂದ ಮುನ್ನಡೆ ಗಳಿಸಿದ್ದ ಸಿಂಧು ಅವರಿಗೆ ತಿರುಗೇಟು ನೀಡಿದ ಬುಸಾನನ್ 16–15 ಪಾಯಿಂಟ್ಗೆ ತಲುಪಿದ್ದರು. ಆದರೆ, ಸಿಂಧು ಚುರುಕಿನ ಆಟದ ಎದುರು ಬುಸಾನನ್ ಮಂಕಾದರು. ಮೊದಲ ಗೇಮ್ನಲ್ಲಿ 21–16ರಿಂದ ಸಿಂಧು ಮುನ್ನಡೆ ಸಾಧಿಸಿದರು. ಎರಡನೇ ಗೇಮ್ನಲ್ಲಿ ಪಾಯಿಂಟ್ಗಳಿಕೆ ಅವಕಾಶ ನೀಡದ ಸಿಂಧು 21–8ರಲ್ಲಿ ನೇರ ಸೆಟ್ಗಳಿಂದ ಗೆಲುವು ತಮ್ಮದಾಗಿಸಿಕೊಂಡರು.

ಈ ಹಿಂದೆ ಸಿಂಧು ಮತ್ತು ಬುಸಾನನ್ 16 ಬಾರಿ ಎದುರಾಗಿದ್ದು, 15 ಪಂದ್ಯಗಳಲ್ಲಿ ಸಿಂಧು ಜಯ ಸಾಧಿಸಿದ್ದರು.

ಇದನ್ನೂ ಓದಿ–ICC Womens World Cup: ಭಾರತ ವಿಶ್ವಕಪ್ನಿಂದ ನಿರ್ಗಮನ; ಮತ್ತೆ ಕಾಡಿದ ನೋ ಬಾಲ್

79 ನಿಮಿಷ ನಡೆದಿದ್ದ ಸೆಮಿಫೈನಲ್ನಲ್ಲಿ ಸಿಂಧು 21–18, 15–21, 21–19ರಲ್ಲಿ ಥಾಯ್ಲೆಂಡ್ನ ಸುಪನಿಡ ಕಾಥೆತಾಂಗ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.