ಬೆಂಗಳೂರು: ಪ್ರತಿಕೂಲ ಹವಾಮಾನವನ್ನು ಮೆಟ್ಟಿನಿಂತು ಮುನ್ನಡೆದ ತೇಜ್ ಗಂಗವರ್ಪು ಅವರು ಬುಧವಾರ ಆರಂಭಗೊಂಡ ಚಾಂಪಿಯನ್ಸ್ ಗಾಲ್ಫ್ ಟೂರ್ನ ಎರಡನೇ ಲೆಗ್ನಲ್ಲಿ ಮುನ್ನಡೆ ಸಾಧಿಸಿದರು. ರಾಷ್ಟ್ರೀಯ ಚಾಂಪಿಯನ್ ಆರ್ಯನ್ ರೂಪ ಆನಂದ್ ಅವರನ್ನು ಹಿಂದಿಕ್ಕಿದ ಅವರು ಹದಿಹರಯದ ಬಾಲಕ ಮತ್ತು ಅಮೆಚೂರ್ ವಿಭಾಗದಲ್ಲಿ ಅನಂಜನ್ ಕೌಶಿಕ್ ಸವಾಲನ್ನೂ ಮೆಟ್ಟಿನಿಂತರು.

ಈಗಲ್ಟನ್ ಗಾಲ್ಫ್ ರೆಸಾರ್ಟ್ನಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ಮತ್ತು ಅಮೆಚೂರ್ ವಿಭಾಗದಲ್ಲಿ ಸ್ನೇಹಾ ಶರಣ್ ಹಾಗೂ ವಿಧಾತ್ರಿ ಅರಸ್ ಮುನ್ನಡೆ ಸಾಧಿಸಿದರು. ಮೊದಲ ಲೆಗ್ನ ಚಾಂಪಿಯನ್ ಅವನಿ ಪ್ರಶಾಂತ್ ಮೂರನೇ ಸ್ಥಾನಕ್ಕೆ ಕುಸಿದರು.

ಬಾಲಕರ ಮತ್ತು ಅಮೆಚೂರ್ ವಿಭಾಗದಲ್ಲಿ ಧ್ರುವ ಬೋಪಣ್ಣ, ಮಿಲಿಂದ್ ಸೋನಿ, ಅಕ್ಷಯ್ ನಿರಂಜನ್, ಸೂರಜ್ ಜೋಶಿ, ಕೌಶಲ್ ಮತ್ತು ಅರ್ಣವ್ ಚಟರ್ಜಿ ಅವರೂ ಗಮನ ಸೆಳೆದರು. ಬಾಲಕಿಯರ ಮತ್ತು ಅಮೆಚೂರ್ ವಿಭಾಗದಲ್ಲಿ ಜಾಸ್ಮಿನ್ ಶೇಖರ್ ಮತ್ತು ಪ್ರಕೃತಿ ಶಾಸ್ತ್ರಿ ಗಮನಾರ್ಹ ಆಟವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.