ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paralympic Games: ಭಾರತಕ್ಕೆ ಅವಿಸ್ಮರಣೀಯ ಈ ಪ್ಯಾರಾಲಿಂಪಿಕ್ಸ್

Published : 8 ಸೆಪ್ಟೆಂಬರ್ 2024, 19:30 IST
Last Updated : 8 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments
ಕ್ಲಬ್‌ ಥ್ರೋನಲ್ಲಿ ಧರಮ್‌ವೀರ್ ಕೈಚಳಕ
ಈ ಸಲ ಕ್ಲಬ್‌ ಥ್ರೋನಲ್ಲಿ ಭಾರತದ ಇಬ್ಬರು ಅಥ್ಲೀಟ್‌ಗಳಾದ ಧರಮ್‌ವೀರ್ ಮತ್ತು ಪ್ರಣವ್ ಸೂರ್ಮಾ ಅವರು ಪದಕಗಳನ್ನು ಜಯಿಸಿದರು. ಎಫ್‌ 51 ಕ್ಲಾಸ್‌ನಲ್ಲಿ ಧರಮ್‌ವೀರ್ ಚಿನ್ನ ಜಯಿಸಿದರೆ, ಪ್ರಣವ್ ಬೆಳ್ಳಿಗೆ ಕೊರಳೊಡ್ಡಿದರು. ಧರಮ್‌ವೀರ್ ಅವರು ಸೋನಿಪತ್‌ನವರು. ಡೈವಿಂಗ್ ಮಾಡುವಾಗ ಅಪಘಾತಕ್ಕೊಳಗಾಗಿದ್ದರು. ಅದರಲ್ಲಿ ಅವರ ಸೊಂಟದ ಕೆಳಭಾಗವು ಪಾರ್ಶ್ವವಾಯುವಿಗೆ ಒಳಗಾಯಿತು.  ಧರಮ್ ಅವರು ತಮ್ಮ ಸ್ನೇಹಿತ ಪ್ಯಾರಾ ಅಥ್ಲೀಟ್ ಅಮಿತ್ ಕುಮಾರ್ ಸರೋಹಾ ಅವರ ಮಾರ್ಗದರ್ಶನದಲ್ಲಿ  ಕ್ಲಬ್‌ ಥ್ರೋ ಪದಕ ಸಾಧನೆ ಮಾಡಿದ್ದಾರೆ.
ಈಜು ಸ್ಪರ್ಧೆ: ಭಾರತದದಿಂದ ಒಬ್ಬ ಸ್ಪರ್ಧಿ
ಭಾರತದಿಂದ ಪ್ಯಾರಾಲಿಂಪಿಕ್ಸ್‌ ಈಜು ವಿಭಾಗದಲ್ಲಿ ಭಾರತದಿಂದ ಏಕೈಕ ಸ್ಪರ್ಧಿ ಭಾಗವಹಿಸಿದ್ದರು. ಈಜು ಕ್ರೀಡೆಯಲ್ಲಿ 25ಕ್ಕೂ ಹೆಚ್ಚು ಸ್ಪರ್ಧಾ ವಿಭಾಗಗಳು ಇವೆ. ಅದ್ದರಿಂದ ಪದಕ ಜಯಿಸುವ ಅವಕಾಶಗಳು ಹೆಚ್ಚು. ಚೀನಾ ದೇಶವು ಈಜು ಕ್ರೀಡೆಯಲ್ಲಿಯೇ 54 ಪದಕಗಳನ್ನು ಗೆದ್ದಿದೆ. ಅದರಲ್ಲಿ 20 ಚಿನ್ನದ ಪದಕಗಳು ಇವೆ. ಆದರೆ ಪದಕ ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಬರಬೇಕಾದರೆ ಮುಂದಿನ ಕೂಟದಲ್ಲಿ ಈಜು ವಿಭಾಗದಲ್ಲಿ ಹೆಚ್ಚು ಸ್ಪರ್ಧಿಗಳನ್ನು ಕಣಕ್ಕಿಳಿಸಿದರೆ ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT