ಟೋಕಿಯೊ: ಯುವ ಹಾಗೂ ಅನುಭವಿ ಆಟಗಾರ್ತಿಯರನ್ನು ಹೊಂದಿರುವ ಹೊರತಾಗಿಯೂ ಭಾರತದ ಮಹಿಳಾ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ 1-4 ಗೋಲುಗಳ ಅಂತರದಲ್ಲಿ ಸೋಲಿಗೆ ಶರಣಾಗಿದೆ.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಬುಧವಾರ ನಡೆದ 'ಎ' ಗುಂಪಿನ ಮೂರನೇ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಮುಗ್ಗರಿಸಿತು.

ಇದನ್ನೂ ಓದಿ:Tokyo Olympics: ಹೆತ್ತಬ್ಬೆ ಬಳಿ ಮಗುವಾದ ಮೀರಾಬಾಯಿ

ಉತ್ತಮ ಅವಕಾಶಗಳನ್ನು ಕೈಚೆಲ್ಲಿರುವುದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಅತ್ತ ಬ್ರಿಟನ್ ಪರ ಹನ್ನ ಮಾರ್ಟಿನ್ (2ನೇ ಹಾಗೂ 19ನೇ ನಿಮಿಷ), ಲಿಲ್ಲಿ ಓಸ್ಲೆ (41ನೇ ನಿಮಿಷ), ಗ್ರೇಸ್ ಬಾಲ್ಸ್ಡನ್ (57ನೇ ನಿಮಿಷ) ಗೆಲುವಿನ ಗೋಲುಗಳನ್ನು ಬಾರಿಸಿದರು.

ಭಾರತದ ಪರ 23ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

ಈ ಪಂದ್ಯದಲ್ಲಿ ಭಾರತ ಕನಿಷ್ಠ ಒಂದು ಅಂಕವನ್ನಾದರೂ ಗಳಿಸಬೇಕಿತ್ತು. ಆದರೆ ಈಗ ಕ್ವಾರ್ಟರ್ಫೈನಲ್ ಹಂತವನ್ನು ತಲುಪಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅಂಕಪಟ್ಟಿಯಲ್ಲಿ ಇನ್ನಷ್ಟೇ ಖಾತೆ ತೆರೆಯಬೇಕಾಗಿರುವ ಭಾರತ ತಂಡವು ಕೊನೆಯ ಸ್ಥಾನದಲ್ಲಿದೆ.

ರಾಣಿ ರಾಂಪಾಲ್ ಪಡೆಯು ವಿಶ್ವ ನಂ.1 ರ್ಯಾಂಕ್ನ ಹಾಲೆಂಡ್ ವಿರುದ್ಧ 1-5 ಮತ್ತು ಜರ್ಮನಿ ವಿರುದ್ಧ 0-2ರ ಗೋಲುಗಳ ಅಂತರದ ಸೋಲು ಅನುಭವಿಸಿತ್ತು.

ಈಗ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಐರ್ಲೆಂಡ್ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.