ಟೋಕಿಯೊ:2020ರಲ್ಲಿ ಜಪಾನಿನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಸುತ್ತಿನ ಸೆಮಿಫೈನಲ್‌ಗೆ ಭಾರತದ ಆರು ಬಾಕ್ಸರ್‌ಗಳು ಲಗ್ಗೆಯಿಟ್ಟಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಬಾರಿ ಪದಕಗೆದ್ದಿರುವ ಶಿವ ಥಾಪಾ(63ಕೆ.ಜಿ) ಸೇರಿದಂತೆ,ಈ ಹಿಂದೆ ವಿಶ್ವ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ನಿಖಾತ್ ಝರೀನ್(51ಕೆ.ಜಿ), ಏಷ್ಯನ್ ಬೆಳ್ಳಿ ಪದಕ ವಿಜೇತ ಸುಮಿತ್ ಸಂಗ್ವಾನ್(91ಕೆ.ಜಿ), ಆಶಿಷ್(69ಕೆ.ಜಿ), ವಾನ್‌ಹ್ಲಿಪುಯಾ(75ಕೆ.ಜಿ), ಸಿಮ್ರನ್‌ಜೀತ್ ಕೌರ್(60ಕೆ.ಜಿ) ಹಾಗೂ ಪೂಜಾ ರಾಣಿ(75ಕೆ.ಜಿ) ಅವರೂ ಸೆಮಿಫೈನಲ್ ತಲುಪಿದ್ದಾರೆ.

ಜಪಾನಿನ ಯೂಕಿ ಹಿರಾಕವ ಅವರ ಎದುರು ಥಾಪಾ 5–0 ಅಂತರದಲ್ಲಿ ಗೆಲುವು ಸಾಧಿಸಿದರು. ಅಸ್ಸಾಂನ ಥಾಪಾ ಇದೇ ತಿಂಗಳು ರಾಷ್ಟ್ರೀಯ ಎಲೀಟ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸಲ ಪ್ರಶಸ್ತಿ ಗೆದ್ದಿದ್ದರು.ಥಾಪಾ ಸೆಮಿಫೈನಲ್‌ನಲ್ಲಿ ಜಪಾನಿನವರೇ ಆದ ದೈಸುಕೆ ನರಿಮಟ್ಸು ಎದುರು ನಾಳೆ(ಅ.30) ಸೆಣಸಲಿದ್ದಾರೆ.ನರಿಮಟ್ಸು ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.

ಭಾರತದ ಉಳಿದ ಬಾಕ್ಸರ್‌ಗಳಿಗೆ ಎದುರಾಳಿಗಳು ಯಾರುಎಂಬುದು ಕ್ವಾರ್ಟರ್ ಫೈನಲ್ ಸುತ್ತಿನ ಬಾಕಿ ಇರುವ ಪಂದ್ಯಗಳು ಮುಗಿದ ಬಳಿಕ ಗೊತ್ತಾಗಲಿದೆ.

ಕ್ವಾರ್ಟರ್ ಫೈನಲ್ ತಲುಪಿದ್ದ ಭಾರತದ ಮತ್ತೊಬ ಬಾಕ್ಸರ್ ಅನಂತ್ ಚೋಪಡೆ ತೋಷೋ ಕಷಿವಾಸಕಿ ವಿರುದ್ಧ 2–3 ಅಂತರದಲ್ಲಿ ಸೋಲು ಕಂಡು ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.