ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ನಿಗದಿಗಿಂತ 100 ಗ್ರಾಂ ತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದರು. ಈ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮೌನ ಮುರಿದಿದ್ದಾರೆ.

ವಿನೇಶ್ ಫೋಗಟ್‌ನ ಅನರ್ಹ ವಿಚಾರ ಪ್ರಸ್ತಾಪಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ. ಆ ನಿಯಮಗಳನ್ನು ಸನ್ನಿವೇಶಕ್ಕೆ ಅನುಗುಣವಾಗಿ ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ಮರುಪರಿಶೀಲಿಸಲು ಅವಕಾಶವಿರುತ್ತದೆ. ವಿನೇಶ್ ಫೋಗಟ್ ಫೈನಲ್‌ಗೆ ನ್ಯಾಯೋಚಿತವಾಗಿ ಅರ್ಹತೆ ಪಡೆದಿದ್ದರು. ಫೈನಲ್‌ಗೂ ಮೊದಲು ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಅನರ್ಹಗೊಂಡಿದ್ದರು. ಅಲ್ಲದೆ, ಅರ್ಹ ಬೆಳ್ಳಿ ಪದಕವನ್ನು ಆಕೆಯಿಂದ ಕಸಿದುಕೊಳ್ಳಲಾಗಿದೆ. ವಿನೇಶ್‌ಗೆ ಕ್ರೀಡಾಪ್ರಜ್ಞೆ ಮೆರೆದು ಬೆಳ್ಳಿ ಪದಕ ನೀಡಬೇಕಿತ್ತು’ ಎಂದು ಹೇಳಿದ್ದಾರೆ.

‘ಉದ್ದೀಪನ ಮದ್ದು ಸೇವನೆಯಂತಹ ನೈತಿಕ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದ್ದರೆ ಅದಕ್ಕೆ ಅರ್ಥವಿರುತ್ತಿತ್ತು. ಆ ಸಂದರ್ಭದಲ್ಲಿ ಯಾವುದೇ ಪದಕವನ್ನು ನೀಡದಿರುವುದು ಮತ್ತು ಕೊನೆಯ ಸ್ಥಾನವನ್ನು ಪಡೆಯುವುದು ಸಮರ್ಥನೀಯವಾಗಿರುತ್ತದೆ. ಆದರೆ, ವಿನೇಶ್ ತನ್ನ ಎದುರಾಳಿಯನ್ನು ತಕ್ಕಮಟ್ಟಿಗೆ ಸೋಲಿಸಿ ಅಗ್ರ ಎರಡನೇ ಸ್ಥಾನ ತಲುಪಲು ಅವರು ಶ್ರಮಿಸಿದ್ದಾರೆ. ಆಕೆ ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹಳು’ ಎಂದು ಸಚಿನ್ ತಿಳಿಸಿದ್ದಾರೆ.

ವಿನೇಶ್ ಫೋಗಟ್ ಅನರ್ಹ ಪ್ರಕರಣ ಸಂಬಂಧ ಕ್ರೀಡಾ ನ್ಯಾಯಮಂಡಳಿಯ (ಸಿಎಎಸ್) ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.
.ಮಹಿಳೆಯರ ಕ್ರೀಡೆಗೆ ಕಳೆ ತಂದ ಹರಿಯಾಣ ಹುಡುಗಿ: ಫೋಗಟ್ ಅಖಾಡದ ಕಲಿ ವಿನೇಶ್.ವಿನೇಶ್ ಫೋಗಟ್ ಟೀಕೆ ಎದುರಿಸಲಿ: Olympics ಪದಕ ವಿಜೇತೆ ಸೈನಾ ಹೀಗೆ ಹೇಳಿದ್ದೇಕೆ?.ವಿನೇಶ್ ಫೋಗಟ್ ವಿಚಾರವಾಗಿ ರಾಜ್ಯಸಭೆಯಲ್ಲಿ ಗದ್ದಲ: ಸದನದಿಂದ ಹೊರನಡೆದ ಸಭಾಪತಿ!.ಕ್ರೀಡಾ ಮಂಡಳಿಯಲ್ಲಿ ವಿನೇಶ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಕಾಲತ್ತು.Vinesh Phogat Disqualified: ವಿನೇಶಾ ‘ಡಯಟ್’ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.Vinesh Phogat Retires: ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.