ರಿಯಾದ್: ಭಾರತದ ಶುಭಂ ತೋಡ್ಕರ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನ ಪುರುಷರ 61 ಕೆ.ಜಿ. ವಿಭಾಗದ ‘ಡಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದರು.

ಮಹಾರಾಷ್ಟ್ರದ 26 ವರ್ಷದ ಶುಭಂ ಅವರು ಸೋಮವಾರ ನಡೆದ ಸ್ಪರ್ಧೆಯಲ್ಲಿ ಒಟ್ಟು 269 ಕೆ.ಜಿ (119 ಕೆ.ಜಿ+ 150 ಕೆ.ಜಿ) ಭಾರ ಎತ್ತಿದರು. ಮೇ ತಿಂಗಳಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಷಿಪ್ (263 ಕೆ.ಜಿ.) ಮತ್ತು ಜುಲೈನಲ್ಲಿ ನಡೆದಿದ್ದ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ (259 ಕೆ.ಜಿ.) ತೋರಿದ್ದ ಪ್ರದರ್ಶನಕ್ಕಿಂತ ಉತ್ತಮ ಸಾಧನೆ ಅವರಿಂದ ಮೂಡಿಬಂತು.

ಮಲೇಷ್ಯಾದ ಅಝ್ನಿಲ್ ಮುಹಮ್ಮದ್ (290 ಕೆ.ಜಿ) ಮತ್ತು ಕೊರಿಯಾದ ರೊಕ್ ಶಿನ್ (280 ಕೆ.ಜಿ) ಅವರು ‘ಡಿ’ ಗುಂಪಿನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರು.

ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು ಮೊದಲೇ ನಿರ್ಧರಿಸಿದಂತೆ ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಪಾಲ್ಗೊಂಡರೂ ಭಾರ ಎತ್ತಲಿಲ್ಲ. ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತಾ ಕೂಟವಾಗಿರುವುದರಿಂದ ಮೀರಾಬಾಯಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿತ್ತು. ದೇಹತೂಕ ಅಳೆಯುವುದು ಸೇರಿದಂತೆ ಸ್ಪರ್ಧೆಗೆ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅವರು ಹಿಂದೆ ಸರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.