ಬೆಂಗಳೂರು: ಎಸ್ ಪದ್ಮನಾಭನ್ ತರಬೇತಿಯಲ್ಲಿ ಪಳಗಿರುವ ’ವೆಲ್ ಕನೆಕ್ಟೆಡ್’ ಭಾನುವಾರ ಏರ್ಪಡಿಸಿದ್ದ ಬೇಸಿಗೆ ರೇಸ್‌ಗಳ ಶ್ರೀಮಂತ ರೇಸ್ ‘ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು’ನಲ್ಲಿ ತನ್ನ ಸಮೀಪ ಸ್ಪರ್ಧಿ ’ಇಂಪಾವಿಡ್’ ವಿರುದ್ಧ ನೇರ ಅಂತರದ ರೋಚಕ ಜಯ ಗಳಿಸಿದೆ.

ನಿರೀಕ್ಷಿಸಿದಂತೆ, ‘ವೆಲ್ ಕನೆಕ್ಟೆಡ್’ ಮತ್ತು ’ಇಂಪಾವಿಡ್’ ಮೇಲೆಯೆ ಎಲ್ಲರ ಗಮನ ಕೇಂದ್ರಿಕೃತವಾಗಿತ್ತು. ಬುಕ್ ಮೇಕರ್ಸ್ ‘ವೆಲ್ ಕನೆಕ್ಟೆಡ್’ಗೆ 9/4 ಬೆಲೆಯನ್ನು, ‘ಇಂಪಾವಿಡ್’ ಗೆ 5/2 ಬೆಲೆಯನ್ನು ನೀಡಿದ್ದರೆ, ಉಳಿದ ಕುದುರೆಗಳಿಗೆ 8/1ಕ್ಕಿಂತಲೂ ಹೆಚ್ಚಿನ ಬೆಲೆಯನ್ನು ನೀಡಿದ್ದರು.

ರೇಸ್‌ಗೆ ಚಾಲನೆ ದೊರೆತ ಕೂಡಲೇ ಜಾಕಿ ಎ.ಸಂದೇಶ್ ಸ್ಟಾರ್ಟ್ ಟು ಫಿನಿಶ್ ಪ್ರಯತ್ನದಲ್ಲಿ ‘ಇಂಪಾವಿಡ್’ನ್ನು ಮುನ್ನೆಡೆಸುತ್ತಾ, ಕೊನೆಯ ನೇರ ಓಟದ ಫರ್ಲಾಂಗ್‌ನಲ್ಲಿ ಗೆಲುವನ್ನು ತನ್ನದಾಗಿಸಿಕೊಳ್ಳುವ ಎಲ್ಲಾ ಸೂಚನೆಗಳನ್ನು ನೀಡಿದ್ದರು. ಆದರೆ, ಆ ಕ್ಷಣದಲ್ಲಿ ಐದನೇ ಅಥವಾ ಆರನೇ ಸ್ಥಾನದಲ್ಲಿದ್ದ ‘ವೆಲ್ ಕನೆಕ್ಟೆಡ್’ನ್ನು ವಿದೇಶಿ ಜಾಕಿ ಡೆವಿಡ್ ಆಲನ್ ತಮ್ಮ ಚಾಕಚಕ್ಯತೆಯ ಸವಾರಿಯಲ್ಲಿ ‘ವೆಲ್ ಕನೆಕ್ಟೆಡ್’ನ ಎಲ್ಲಾ ಸಾಮರ್ಥ್ಯವನ್ನು ಕ್ರೋಢಿಕರಿಸಿ ‘ವೆಲ್ ಕನೆಕ್ಟೆಡ್’ ನ್ನು ರಭಸದಿಂದ ಮುನ್ನುಗಿಸಿಕೊಂಡು ಬಂದು ವಿನ್ನಿಂಗ್ ಪೋಸ್ಟ್ ಬಳಿ ‘ಇಂಪಾವಿಡ್’ನ್ನು ಲಾಗ್ ನೆಕ್ ಅಂತರದಿಂದ ಹಿಂದಿಕ್ಕಿ ರೋಚಕ ಜಯಗಳಿಸಿದರು.

ಎಸ್.ಪದ್ಮನಾಭನ್ ತರಬೇತಿಯಲ್ಲಿ ಪಳಗಿರುವ ಇನ್ನೊಂದು ಸ್ಪರ್ಧಿ ‘ನೈಟ್ ಟೆಂಪ್ಲರ್’ ಮೂರನೇ ಸ್ಥಾನ ಗಳಿಸಿದರೆ, ಎಸ್.ಗಣಪತಿ ತರಬೇತಿಯಲ್ಲಿ ಪಳಗಿರುವ ‘ಸದರ್ನ್ ರೂಲರ್’ ನಾಲ್ಕನೇ ಸ್ಥಾನ ಗಳಿಸಿತು.

ಈ ಗೆಲುವಿನೊಂದಿಗೆ ಅರಾಜಾನ್–ಗೆಸ್ಟ್ ಕನೆಕ್ಷನ್ಸ್ ಸಂತತಿಯ ‘ವೆಲ್ ಕನೆಕ್ಟೆಡ್’ ಹೆಣ್ಣು ಕುದುರೆ ತನ್ನ ಮಾಲೀಕರಿಗೆ ಮೊದಲನೇ ಬಹುಮಾನ ರೂ. 1 ಕೋಟಿ 51.64 ಲಕ್ಷ ಮತ್ತು ರೂ.3.0 ಲಕ್ಷ ಮೌಲ್ಯದ ಸುಂದರ ಟ್ರೋಫಿಯನ್ನು ತನ್ನ ಮಾಲೀಕರಿಗೆ ದೊರೆಕಿಸಿಕೊಟ್ಟಿದೆ. 2000 ಮೀಟರ್ಸ್ ದೂರದ ಡರ್ಬಿ ರೇಸ್ ಜಯಗಳಿಸಲು ‘ವೆಲ್ ಕನೆಕ್ಟೆಡ್’ 2 ನಿಮಿಷ 05.88 ಸೆಕೆಂಡ್ಸ್ ತೆಗೆದುಕೊಂಡಿದೆ.

‘ವೆಲ್ ಕನೆಕ್ಟೆಡ್’ ಜಂಟಿ ಮಾಲೀಕರು: ಪೂನಾವಾಲ ಬ್ರೀಡರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಡಿ.ಟಿ ರೇಸಿಂಗ್ ಅಂಡ್ ಬ್ರೀಡಿಂಗ್ ಲಿಮಿಟೆಡ್.

‘ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿಯಲ್ಲಿ ಮೊದಲ 4 ಸ್ಥಾನಗಳು

ಸ್ಥಾನ;ಕುದುರೆ ಹೆಸರು;ಟ್ರೇನರ್;ಸವಾರ;ಸಮಯ;ಬಹುಮಾನದ ಮೊತ್ತ (₹ಗಳಲ್ಲಿ)

1;ವೆಲ್ ಕನೆಕ್ಟೆಡ್;ಎಸ್.ಪದ್ಮನಾಭನ್;ಡೆವಿಡ್ ಆಲನ್;2:05.88;1,51,64,821

2;ಇಂಪಾವಿಡ್;ಅಜುರ್ನ್‌ಮಂಗ್ಳೋರ್ಕರ್;ಎ.ಸಂದೇಶ್:2:05.93;50,54,940

3;ನೈಟ್ ಟೆಂಪ್ಲರ್;ಎಸ್.ಪದ್ಮನಾಭನ್;ಎಸ್.ಜರ್ವಾನ್;2:6.13;25,27,400

4;ಸದರ್ನ್ ರೂಲರ್;ಎಸ್.ಗಣಪತಿ;ಭವಾನಿ ಸಿಂಗ್;2:6.87;12,63,744

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.