ಬೆಂಗಳೂರು: ಅಖಿಲ ಭಾರತ ಟೆನಿಸ್ ಸಂಸ್ಥೆಯು (ಎಐಟಿಎ), ಭಾರತ ವೀಲ್ಚೇರ್ ಟೆನಿಸ್ ಟೂರ್ (ಐಡಬ್ಲ್ಯುಟಿಟಿ) ಹಾಗೂ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಸಹಯೋಗದೊಂದಿಗೆ ವೀಲ್ಚೇರ್ ಟೆನಿಸ್ ಆಟಗಾರರಿಗೆ ಹಾಗೂ ಕೋಚ್ಗಳಿಗೆ ತರಬೇತಿ ಶಿಬಿರ ಆಯೋಜಿಸಿದೆ.

ಡಿ.20ರಂದು ಆರಂಭವಾಗಿರುವ ಶಿಬಿರವನ್ನು ಖ್ಯಾತ ಕೋಚ್ ನೆದರ್ಲೆಂಡ್ಸ್ನ ಮಾರ್ಕ್ ಕಾಲ್ಕ್ಮನ್ ಹಾಗೂ ಅವರ ಪತ್ನಿ, ನಾಲ್ಕು ಬಾರಿಯ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ಮೊನಿಕ್ ಕಾಲ್ಕ್ಮನ್ ವ್ಯಾನ್ ಡೆನ್ ಬಾಷ್ ನಡೆಸಿಕೊಡುತ್ತಿದ್ದಾರೆ.

ಕೆಎಸ್ಎಲ್ಟಿಎ ಅಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ 29 ಆಟಗಾರರು ಭಾಗವಹಿಸಿದ್ದಾರೆ.

ಶಿಬಿರದ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೆಎಸ್ಎಲ್ಟಿಎ ಜಂಟಿ ಕಾರ್ಯದರ್ಶಿ ಪಿ.ಆರ್.ರಾಮಸ್ವಾಮಿ ‘ಅಂಗವಿಕಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಕೆಎಸ್ಎಲ್ಟಿಎ ಸಾಧ್ಯವಾದಷ್ಟು ಇಂತಹ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದೆ ಎಂದರು.

‘ಭಾರತದಲ್ಲಿ ವೀಲ್ಚೇರ್ ಟೆನಿಸ್ನ ಬೆಳವಣಿಗೆಗೆ ಯೋಜನೆ ರೂಪಿಸಲಾಗುತ್ತಿದೆ. 2022ರ ಏಷ್ಯನ್ ಗೇಮ್ಸ್ನಲ್ಲಿ ಆಡುವಂತೆ ಸಜ್ಜುಗೊಳಿಸುವುದು ನಮ್ಮ ಮೊದಲ ಗುರಿಯಾಗಿದೆ’ ಎಂದು ಅಖಿಲ ಭಾರತ ವೀಲ್ಚೇರ್ ಟೆನಿಸ್ ಟೂರ್ ಅಧ್ಯಕ್ಷ ಸುನಿಲ್ ಜೈನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.