ರಾಂಚಿ: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡವು ಗುರುವಾರ ದಕ್ಷಿಣ ಕೊರಿಯಾ ತಂಡವನ್ನು 5–0 ಗೋಲುಗಳಿಂದ ಸುಲಭವಾಗಿ ಮಣಿಸಿತು. ಈ ಮೂಲಕ ಲೀಗ್ ಹಂತದ ಎಲ್ಲ ಐದೂ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿತು.

ಭಾರತದ ಪರ ಸಲೀಮಾ (6ನೇ ಮತ್ತು 36ನೇ ನಿ), ನವನೀತ್ ಕೌರ್ (36ನೇ) ವಂದನಾ ಕಟಾರಿಯಾ (49ನೇ) ಮತ್ತು ನೇಹಾ (60ನೇ) ಗೋಲು ಗಳಿಸಿದರು.

ಭಾರತ ತಂಡವು 15 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಶನಿವಾರ ನಡೆಯುವ ಸೆಮಿಫೈನಲ್ನಲ್ಲಿ ಮತ್ತೆ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯಾ ಏಳು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಮತ್ತೊಂದು ಪಂದ್ಯದಲ್ಲಿ ಚೀನಾವು 1–0 ಯಿಂದ ಜಪಾನ್ ತಂಡವನ್ನು ಮಣಿಸಿತು. ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಚೀನಾ ಮತ್ತು ಜಪಾನ್ ಶನಿವಾರ ನಡೆಯುವ ಮತ್ತೊಂದು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.