ಗುರುಗ್ರಾಮ: ಈ ವರ್ಷದ ಅಕ್ಟೋಬರ್ನಲ್ಲಿ ನಿಗದಿಯಾಗಿದ್ದ ಮಹಿಳೆಯರ ಇಂಡಿಯನ್ ಓಪನ್ ಗಾಲ್ಫ್ ಟೂರ್ನಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಮಂಗಳವಾರ ರದ್ದು ಮಾಡಲಾಗಿದೆ.

ಈ ಟೂರ್ನಿಯು ಲೇಡೀಸ್ ಯೂರೋಪಿಯನ್ ಟೂರ್ನ ಸಹಭಾಗಿತ್ವದಲ್ಲಿ ನಡೆಯುತ್ತಿತ್ತು. ಮುಂದಿನ ವರ್ಷದ ಟೂರ್ನಿಯು ಅಕ್ಟೋಬರ್ ತಿಂಗಳಲ್ಲಿ ಗುರುಗ್ರಾಮದ ಡಿಎಲ್ಎಫ್ ಗ್ಯಾರಿ ಪ್ಲೇಯರ್ ಅಂಗಣ ಹಾಗೂ ಕಂಟ್ರಿ ಕ್ಲಬ್ ಅಂಗಣದಲ್ಲಿ ನಡೆಯಲಿದೆ.

‘ಆಟಗಾರರು ಮತ್ತಿತರರ ಆರೋಗ್ಯ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಭಾರತ ಮಹಿಳಾ ಗಾಲ್ಫ್ ಸಂಸ್ಥೆ (ಡಬ್ಲ್ಯುಜಿಎಐ) ಹಾಗೂ ದ ಲೇಡೀಸ್ ಯೂರೋಪಿಯನ್ ಟೂರ್ (ಎಲ್ಇಟಿ) ಸ್ಪಷ್ಟಪಡಿಸಿವೆ.

‘ಇದೊಂದು ಬಹಳ ಕಠಿಣ ನಿರ್ಧಾರ. ಆದರೆ ಕೋವಿಡ್ ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟೂರ್ನಿಯನ್ನು ರದ್ದುಗೊಳಿಸುವುದು ಸೂಕ್ತವಾದ ನಿರ್ಧಾರ’ ಎಂದುಡಬ್ಲ್ಯುಜಿಎಐ ಅಧ್ಯಕ್ಷೆ ಕವಿತಾ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.