ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕುಸ್ತಿಪಟುಗಳು ವಿವಿಧ ದೇಶಗಳ ಒಲಿಂಪಿಕ್ ಪದಕ ವಿಜೇತರ ನೆರವು ಕೋರಲು ತೀರ್ಮಾನಿಸಿದ್ದಾರೆ. ಇದರೊಂದಿಗೆ ಪ್ರತಿಭಟನೆಯನ್ನು ‘ವಿಶ್ವಮಟ್ಟದ ಆಂದೋಲನ‘ ವನ್ನಾಗಿ ರೂಪಿಸುವ ನಿರ್ಧಾರ ಕೈಗೊಂಡಿದ್ದಾರೆ.

ಬ್ರಿಜ್ಭೂಷಣ್ ಅವರನ್ನು ಬಂಧಿಸಬೇಕೆನ್ನುವ ನಮ್ಮ ಬೇಡಿಕೆ ಈಡೇರದಿದ್ದರೆ ಮೇ 21ರಂದು ‘ದೊಡ್ಡ ನಿರ್ಧಾರ’ವೊಂದನ್ನು‘ ತೆಗೆದುಕೊಳ್ಳುವೆವು‘ ಎಂದೂ ಕುಸ್ತಿಪಟುಗಳು ಎಚ್ಚರಿಸಿದ್ದಾರೆ.

‘ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದ್ದೇವೆ. ಇದಕ್ಕಾಗಿ ಬೇರೆ ಬೇರೆ ದೇಶಗಳ ಒಲಿಂಪಿಯನ್ಸ್ ಮತ್ತು ಒಲಿಂಪಿಕ್ ಪದಕ ವಿಜೇತರನ್ನು ಸಂಪರ್ಕಿಸಿ ಬೆಂಬಲ ಕೋರುವೆವು‘ ಎಂದು ಕುಸ್ತಿಪಟು ವಿನೇಶಾ ಪೋಗಟ್ ಹೇಳಿದ್ದಾರೆ.

ಕಳಂಕ ತರುವ ಯತ್ನ

‘ತಮ್ಮ ಪ್ರತಿಭಟನೆಗೆ ಕಳಂಕ ತರಲು ಭಾನುವಾರ ರಾತ್ರಿ ಕೆಲವರು ಪ್ರಯತ್ನಿಸಿದರು. ಪ್ರತಿಭಟನೆ ಸ್ಥಳದಲ್ಲಿ ನಮ್ಮ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತಿದೆ. ನಮ್ಮ ಫೋಟೊ ತೆಗೆಯಲಾಗುತ್ತಿದ್ದ ಕೆಲವರನ್ನು ತಡೆಯಲು ಪ್ರಯತ್ನಿಸಿದರೆ ಅವರು ನಮ್ಮ ಮಾತು ಕೇಳಲಿಲ್ಲ. ಕೆಲವು ಅಪರಿಚಿತ ಮಹಿಳೆಯರು ನಮ್ಮ ಟೆಂಟ್ಗಳಲ್ಲಿ ಮಲಗಲು ಪ್ರಯತ್ನಿಸಿದರು’ ಎಂದು ವಿನೇಶಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.